ಪದೇ ಪದೇ ಒಂದೇ ಗ್ಲಾಸ್/ಬಾಟಲಿನಲ್ಲಿ ನೀರು ಕುಡಿಯುತ್ತೀರಾ? ಹೆಚ್ಚಾಗಬಹುದು ಈ ಸಮಸ್ಯೆ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿ ದಿನ ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ.
ನಮ್ಮಲ್ಲಿ ಬಹುತೇಕ ಜನರು ಪದೇ ಪದೇ ಒಂದೇ ಗ್ಲಾಸ್ ಅಥವಾ ಬಾಟಲಿನಲ್ಲಿ ನೀರು ಕುಡಿಯುತ್ತಾರೆ. ಇದಕ್ಕೆ ಲೋಟ ತೋಳಿಯಬೇಕಲ್ಲ ಎಂಬ ಸೋಮಾರಿತನವಷ್ಟೇ ಕಾರಣವಲ್ಲ. ಮಾಹಿತಿಯ ಕೊರತೆಯಿಂದಾಗಿಯೂ ಕೆಲವರು ಈ ತಪ್ಪು ಮಾಡುತ್ತಾರೆ. ಆದರಿದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಎಂದಾದರೂ ಯೋಚಿಸಿದ್ದೀರಾ?
ವಾಸ್ತವವಾಗಿ, ಒಮ್ಮೆ ನೀರು ಕೂಡಿದ ಲೋಟವನ್ನು ತೊಳೆಯದೆ ಮತ್ತೆ ಅದೇ ಲೋಟದಲ್ಲಿ ನೀರು ಕುಡಿಯುವುದು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ವಾಸ್ತವವಾಗಿ ನಾವು ಲೋಟದಲ್ಲಿರಲಿ, ಇಲ್ಲವೇ ಬಾಟಲಿನಲ್ಲಿರಲಿ ಕಚ್ಚಿ ನೀರು ಕುಡಿಯುವಾಗ ನಮ್ಮ ತುಟಿಗಳಲ್ಲಿ ಇರುವ ಬ್ಯಾಕ್ಟೀರಿಯಾಗಳು ಅದರ ಮೇಲೆ ಅಂಟಿಕೊಳ್ಳುತ್ತವೆ. ಅದು ನಂತರ ಸಾಂಕ್ರಾಮಿಕ ವೈರಸ್ ರೂಪವನ್ನು ಪಡೆಯುತ್ತದೆ.
ನಾವು ಒಮ್ಮೆ ನೀರು ಕುಡಿದ ಲೋಟವನ್ನು ತೊಳೆಯದೆ ಮತ್ತೆ ಅದೇ ಲೋಟದಲ್ಲಿ ನೀರು ಕುಡಿಯುವುದರಿಂದ, ಹೊಟ್ಟೆನೋವು, ಅತಿಸಾರದ ಜೊತೆಗೆ ನಾವು ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಬಲಿಯಾಗಬಹುದು. ಮಾತ್ರವಲ್ಲ, ಸಾಂಕ್ರಾಮಿಕ ರೋಗಗಳ ಅಪಾಯವೂ ಹೆಚ್ಚಾಗಬಹುದು.
ಇಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನಿತ್ಯ ನೀವು ಬಳಸುವ ಬಾಟಲ್, ಜಗ್ ಅನ್ನು ಚೆನ್ನಾಗಿ ತೊಳೆದು ನೀರು ತುಂಬಿಸಿ. ಜೊತೆಗೆ ನೀವು ನೀರು ಕುಡಿಯುವ ಲೋಟವನ್ನು ಒಮ್ಮೆ ಬಳಸಿದ ನಂತರ ಮತ್ತೆ ವಾಶ್ ಮಾಡಿದ ಬಳಿಕವಷ್ಟೇ ಬಳಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.