ನಿಮಗೆ ಬೆಳಿಗ್ಗೆ ಎದ್ದೊಡನೆ ಫೋನ್‌ ನೋಡೊ ಅಭ್ಯಾಸ ಇದೆಯಾ..? ಹಾಗಿದ್ರೆ ಎಚ್ಚರ..!

Thu, 20 Jun 2024-12:06 pm,

Do not use phone morning: ಬೆಳಗ್ಗೆ ಎಚ್ಚರವಾದ ಒಡನೆ ಅನೇಕರು ಫೋನ್ ಚೆಕ್ ಮಾಡುವುದು ಸಾಮಾನ್ಯ. ಈ ಅಭ್ಯಾಸವು ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.  

ನೀವು ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ಬಳಸುವುದು ನಿಮ್ಮ ಕೌಶಲ್ಯವನ್ನು ಕುಗ್ಗಿಸುತ್ತದೆ. ಇದು ನೈಸರ್ಗಿಕವಾಗಿ ಎಚ್ಚರಗೊಳ್ಳುವ ಬದಲು ಅನಗತ್ಯವಾಗಿ ಮೆದುಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸುವ ಮೂಲಕ ನಿಮ್ಮನ್ನು ಬೇಗ ಎಚ್ಚರಗೊಳ್ಳುವಂತೆ ಮಾಡುತ್ತದೆ.  

ಮುಂಜಾನೆ ಫೋನ್ ನೋಡುವುದು ನಿಮ್ಮ ಕಣ್ಣುಗಳ ಮೇಲೆ ಅದು ಪ್ರೆಷರ್‌ ಹಾಕುತ್ತದೆ. ಇದು ಕಣ್ಣಿನ ನೋವು, ತಲೆನೋವನ್ನು  ಉಂಟುಮಾಡುವ ಮೂಲಕ ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.  

ಸಾಮಾಜಿಕ ಮಾಧ್ಯಮ, ಇಮೇಲ್‌ಗಳು ಬೆಳಿಗ್ಗೆ ಎಚ್ಚರವಾದ ಒಡನೆ ನಿಮಗೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು ಇದು ದಿನವಿಡೀ ನಿಮ್ಮ ಮನಸ್ಸನ್ನು ಒತ್ತಡದಲ್ಲಿರಿಸುತ್ತದೆ.  

ಸೋಶಿಯಲ್ ಮೀಡಿಯಾದಿಂದ ವಿಚಲಿತರಾಗಿ ಎದ್ದರೆ ಪೂರ್ತಿ ದಿನ ಡಿಸ್ಟರ್ಬ್ಡ್‌ ಮೈಂಡ್‌ನೊಂದಿಗೆ ಸಾಗುತ್ತದೆ. ಇದು ನಿಮ್ಮ ದಿನಚರಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ನಿಮಗೆ ಆಲಸ್ಯವನ್ನುಂಟು ಮಾಡುತ್ತದೆ.   

ಫೋನ್ ಅನ್ನು ನೋಡುವುದರಿಂದ ನೀವು ನಿಮ್ಮ ಕಾರ್ಯಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು ಮತ್ತು ಇದು ಆಲಸ್ಯಕ್ಕೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.  

ಬೆಳಿಗ್ಗೆ ನಿಮ್ಮ ಫೋನ್ ಅನ್ನು ಮೊದಲು ಬಳಸಿದರೆ ಡೋಪಮೈನ್ ಬೇಸ್‌ಲೈನ್ ಹೆಚ್ಚಾಗುತ್ತದೆ. ಇದು ದಿನವಿಡೀ ಸಾಮಾಜಿಕ ಮಾಧ್ಯಮದಲ್ಲಿ ನೀವು ತೊಡಗಿರುವಂತೆ ಮಾಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link