Ten Rupee Coins: ನಿಮ್ಮ ಬಳಿಯೂ 10 ರೂ. ನಾಣ್ಯ ಇದ್ಯಾ? ಚಿಂತಿಸುವ ಅಗತ್ಯವೇ ಇಲ್ಲ ಆರ್‌ಬಿಐನ ಈ ನಿಯಮ ತಿಳಿಯಿರಿ
10 ರೂಪಾಯಿ ನಾಣ್ಯಗಳ ಬಗ್ಗೆ ತಪ್ಪು ಕಲ್ಪನೆಯಿಂದಾಗಿ ಜನರು 10 ರೂ. ಮುಖಬೆಲೆಯ ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ.
10 ರೂಪಾಯಿ ನಾಣ್ಯಗಳ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್- ಆರ್‌ಬಿಐ ಹಲವು ಬಾರಿ ಸ್ಪಷ್ಟನೆ ನೀಡಿದರೂ, ಸಾಕಷ್ಟು ಎಚ್ಚರಿಕೆಗಳನ್ನು ನೀಡಿರುವುದರ ಹೊರತಾಗಿಯೂ, ಇಂದಿಗೂ ಸಹ ಸಣ್ಣ ಪುಟ್ಟ ಚಿಲ್ಲರೆ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಬಹುತೇಕ ಕಡೆಗಳಲ್ಲಿ ಈ ನಾಣ್ಯವನ್ನು ಸ್ವೀಕರಿಸುವುದಿಲ್ಲ.
ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಅಥವಾ ಕೆಲವು ರೀತಿಯ 10 ರೂ. ನಾಣ್ಯಗಳು ನಕಲಿ ನಾಣ್ಯಗಳು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯಿಂದಾಗಿ ವ್ಯಾಪಾರಿಗಳು 10 ರೂ. ಮುಖಬೆಲೆಯ ನಾಣ್ಯಗಳನ್ನು ಪಡೆಯಲು ಹಿಂಜರಿಯುತ್ತಾರೆ.
ಈ ರೀತಿ ಬಹುತೇಕ ಕಡೆಗಳಲ್ಲಿ 10 ರೂಪಾಯಿ ಚಲಾವಣೆ ಬಗ್ಗೆ ತಪ್ಪು ಕಲ್ಪನೆಯಿಂದಾಗಿ ಗ್ರಾಹಕರೂ ಕೂಡ ಚಿಲ್ಲರೆಯಾಗಿ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ.
ಆದರೆ, ನಿಮ್ಮ ಬಳಿ ಹತ್ತು ರೂಪಾಯಿ ನಾಣ್ಯಗಳಿದ್ದರೆ ನೀವು ಚಿಂತಿಸುವ ಅಗತ್ಯವೇ ಇಲ್ಲ. ಬದಲಿಗೆ ಆರ್‌ಬಿಐ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.
10 ರೂಪಾಯಿ ನಾಣ್ಯಗಳನ್ನು ಎಲ್ಲಿ ಬೇಕಾದರೂ ಬಳಸಬಹುದು. ಎಲ್ಲಾ ರೀತಿಯ 10 ರೂಪಾಯಿ ನಾಣ್ಯಗಳು ಕೂಡ ಮಾನ್ಯವಾಗಿದೆ ಎಂದು ಆರ್‌ಬಿಐ ಸಾಕಷ್ಟು ಬಾರಿ ಸ್ಪಷ್ಟಪಡಿಸಿದೆ.
10 ರೂ. ನಾಣ್ಯಗಳು ಮಾನ್ಯವಾಗಿದ್ದು, ಎಲ್ಲೆಡೆ ಈ ನಾಣ್ಯಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಆದೇಶ ಹೊರಡಿಸಿದೆ.
ಯಾವುದೇ ಬ್ಯಾಂಕ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 10 ರೂ. ನಾಣ್ಯಗಳನ್ನು ತೆಗೆದುಕೊಳ್ಳದಿದ್ದಲ್ಲಿ ಗ್ರಾಹಕರು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ದೂರು ದಾಖಲಿಸಬಹುದಾಗಿದೆ.
ಹಾಗಾಗಿ, 10 ರೂ. ನಾಣ್ಯದ ಬಗ್ಗೆ ಯಾವುದೇ ಹಿಂಜರಿಕೆಬೇಡ. 10 ರೂ. ಮುಖಬೆಲೆಯ ನಾಣ್ಯಗಳು ಕೂಡ ಮಾನ್ಯವಾಗಿದ್ದು, ಯಾವುದೇ ರೀತಿ ಭಯವಿಲ್ಲದೆ ಈ ನಾಣ್ಯಗಳನ್ನು ಚಲಾಯಿಸಬಹುದು ಎಂಬುದನ್ನೂ ನೀವೂ ಅರಿಯಿರಿ. ಜೊತೆಗೆ ಬೇರೆಯವರಿಗೂ ಈ ಬಗ್ಗೆ ಅರಿವು ಮೂಡಿಸಿ.