ಸುರೇಶ್ ರೈನಾ ಐಶಾರಾಮಿ ಬಂಗಲೆ ಹೇಗಿದೆ ಮತ್ತು ಬೆಲೆ ಎಷ್ಟು ಗೊತ್ತಾ?
ಸುರೇಶ್ ರೈನಾರ ಈ ಐಷಾರಾಮಿ ಬಂಗಲೆ ಉತ್ತರ ಪ್ರದೇಶದ ಘಜಿಯಾಬಾದ್ನ ರಾಜ್ ನಗರದಲ್ಲಿದೆ. ಗಾಜಿಯಾಬಾದ್ನ ಹೊರತಾಗಿ, ರೈನಾ ದೆಹಲಿ ಮತ್ತು ಲಕ್ನೋದಲ್ಲಿಯೂ ಮನೆಗಳನ್ನು ಹೊಂದಿದ್ದಾರೆ. ಸುರೇಶ್ ರೈನಾ ಅವರ ಈ ಐಶಾರಾಮಿ ಬಂಗಲೆಯ ಬೆಲೆ ಸುಮಾರು 18 ಕೋಟಿ ರೂ. ಎನ್ನಲಾಗಿದೆ.
ರೈನಾ ತನ್ನ ತಂದೆ ತಾಯಿ, ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳಾದ ಗ್ರೇಸಿಯಾ ಮತ್ತು ವಿರಾಯ್ ಜೊತೆ ವಾಸಿಸುತ್ತಿದ್ದಾರೆ. ಈ ಮನೆಯಲ್ಲಿ ಪ್ರತಿಯೊಂದು ಸೌಕರ್ಯವೂ ಇದೆ. ಈ ಮನೆಯಲ್ಲಿ ದೊಡ್ಡ ದೊಡ್ಡ ಕೋಣೆಗಳು, ಅಡುಗೆಮನೆ ಸೇರಿದಂತೆ ಎಲ್ಲವೂ ಲಕ್ಸೂರಿಯಾಗಿದೆ.
ಮನೆಯ ಫೋಟೋಗಳನ್ನು ಶೇರ್ ಮಾಡಿದ ರೈನಾ : ಈ ಮನೆಯಲ್ಲಿ ದೊಡ್ಡದಾದ ಲಾನ್ ಇದೆ. ಸುರೇಶ್ ರೈನಾ ಇಲ್ಲಿ ವರ್ಕೌಟ್ ಮಾಡುತ್ತಿರುವುದು ಕಂಡು ಬರುತ್ತದೆ. ಇದಲ್ಲದೆ ಅವರ ,ಮನೆಯಲ್ಲಿ ಜಿಲ್ ಕೂಡಾ ಇದೆ. ಈ ಮನೆಯ ಇಂಟಿರಿಯರ್ ಕೂಡಾ ಅದ್ಬುತವಾಗಿದೆ.
ಈ ಮನೆಯಲ್ಲಿರುವ ಬೆಡ್ ರೂಂಗಳು ಕೂಡಾ ಬಹಳ ಐಷಾರಾಮಿ ಮತ್ತು ಸುಂದರವಾಗಿದೆ. ದೊಡ್ಡ ಸೋಫಾಗಳು, ಸುಂದರವಾದ ಪರದೆಗಳು ಮತ್ತು ದೊಡ್ಡ ಟಿವಿಗಳನ್ನು ಇಲ್ಲಿ ಕಾಣಬಹುದು. 2017 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಸುರೇಶ್ ರೈನಾ ಅವರ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ರೈನಾ ಪೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.