ಡಿಂಪಲ್ ಕ್ವೀನ್ ರಚಿತಾ ರಾಮ್ ನಟ ದರ್ಶನ್ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ನಟಿ ರಚಿತಾ ರಾಮ್ ಸಿನಿರಂಗ ಪ್ರವೇಶಿಸಿ ಹತ್ತುವರ್ಷಗಳ ಮೇಲಾದವು.. ಈಗಲೂ ಅದೇ ಕ್ರೇಜ್ ಹೊಂದಿದ್ದಾರೆ ಈ ಗುಳಿಕೆನ್ನೆ ಚೆಲುವೆ..
ನಟಿ ರಚಿತಾ ರಾಮ್ ನಟ ದರ್ಶನ್ ಜೊತೆ ಬುಲ್‌ಬುಲ್ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ, ಸೈ ಎನಿಸಿಕೊಂಡಿದ್ದರು..
ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಗೆದ್ದ ನಟಿ ರಚಿತಾ ರಾಮ್ ಬುಲ್‌ಬುಲ್ ಸಿನಿಮಾಗೆ 30,000 ರೂ ಸಂಭಾವನೆ ಪಡೆದಿದ್ದರಂತೆ..
ಇದೇ ಸಿನಿಮಾದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ ಈ ಚೆಲುವೆ ಮುಂದೆ ಶಿವಣ್ಣ, ಅಪ್ಪು, ಕಿಚ್ಚ ಸುದೀಪ್, ಗಣೇಶ್, ಮುಂತಾದ ಟಾಪ್ ಹಿರೋಗಳೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಂಡರು..
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯರ ಪೈಕಿ ಒಬ್ಬರಾಗಿರುವ ರಚಿತಾ ಸದ್ಯ ಒಂದಾದ ಮೇಲೊಂದರಂತೆ ಸತತ ಹಿಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.