ಎಂಎಸ್ ಧೋನಿ ಮಗಳು ಝಿವಾ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಲಕ್ಷ ಗೊತ್ತಾ?

Sun, 10 Dec 2023-5:11 pm,

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಲ್ಲದೆ, ಅವರ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝಿವಾ ಬಗ್ಗೆಯೂ ತಿಳಿಯುವುದು ಅಭಿಮಾನಿಗಳ ಇಷ್ಟಗಳಲ್ಲಿ ಒಂದು.

ಅಂದಹಾಗೆ ನಾವಿಂದು ಈ ವರದಿಯಲ್ಲಿ ಝಿವಾ ಧೋನಿ ಓದುತ್ತಿರುವ ಸ್ಕೂಲ್ ಯಾವುದು, ಅಲ್ಲಿನ ಫೀಜ್ ಎಷ್ಟು, ಹೇಗೆಲ್ಲಾ ಇದೆ ಸೌಲಭ್ಯಗಳು ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಫೆಬ್ರವರಿ 6, 2006 ರಂದು ಜನಿಸಿದ ಝಿವಾ ಧೋನಿ ಇನ್ನೇನು 2 ತಿಂಗಳಲ್ಲಿ ತನ್ನ ಒಂಬತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಲೇಖನದಲ್ಲಿ ರಾಂಚಿಯಲ್ಲಿರುವ ಝಿವಾ ಶಾಲೆಯ ಬಗ್ಗೆ ತಿಳಿದುಕೊಳ್ಳೋಣ.

ಝಿವಾ ಟೌರಿಯನ್ ವರ್ಲ್ಡ್ ಸ್ಕೂಲ್‌’ನ ವಿದ್ಯಾರ್ಥಿನಿಯಾಗಿದ್ದು, ರಾಂಚಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅತ್ಯಂತ ಪ್ರತಿಷ್ಠಿತ ಬೋರ್ಡಿಂಗ್ ಶಾಲೆಗಳಲ್ಲಿ ಒಂದಾಗಿದೆ. (ಇದು ಡೇ ಸ್ಕಾಲರ್ ಸೌಲಭ್ಯವನ್ನು ಸಹ ಹೊಂದಿದೆ).

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌’ನ ಹಳೆಯ ವಿದ್ಯಾರ್ಥಿಯಾದ ಯುವ ದಾರ್ಶನಿಕ ಅಮಿತ್ ಬಜ್ಲಾ ಅವರು 2008 ರಲ್ಲಿ ಸ್ಥಾಪಿಸಿದರು. ಈ ಶಾಲೆಯು ವಿದ್ಯಾರ್ಥಿಗಳ ಪ್ರತ್ಯೇಕತೆಯ ಮೇಲೆ ಕೇಂದ್ರೀಕರಿಸುತ್ತಾ, ಪ್ರಾಯೋಗಿಕ ಶಿಕ್ಷಣವನ್ನು ನೀಡುವುದಕ್ಕೆ ಹೆಚ್ಚು ಖ್ಯಾತಿಯನ್ನು ಗಳಿಸಿದೆ.

ಪ್ರಸ್ತುತ 35ರ ಹರೆಯದ ಮತ್ತು ಮುಂಬೈನಲ್ಲಿ ವಾಸಿಸುತ್ತಿರುವ ಅಮಿತ್ ಬಜ್ಲಾ ಅವರು 2008 ರಿಂದ ಶಾಲೆಯ ಅಧ್ಯಕ್ಷರಾಗಿದ್ದಾರೆ. 65 ಎಕರೆ ಕ್ಯಾಂಪಸ್‌’ನಲ್ಲಿ ಸ್ಥಾಪಿಸಲಾದ ಶಾಲೆಯು ಸಮಗ್ರ ವಿಧಾನವನ್ನು ಹೊಂದಿದೆ. ಸಾವಯವ ಕೃಷಿ, ಕುದುರೆ ಸವಾರಿ ಮತ್ತು ಮುಂತಾದ ವಿವಿಧ ಸೌಲಭ್ಯಗಳನ್ನು ನೀಡುತ್ತದೆ. ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಒತ್ತು ನೀಡುವುದು ಕೂಡ ಇಲ್ಲಿನ ವಿಶೇಷತೆ.

ಶಾಲೆಯ ಫೀಸ್ ಕೊಂಚ ಹೆಚ್ಚಿದ್ದರೂ, ಗುಣಮಟ್ಟದ ಶಿಕ್ಷಣ ಮತ್ತು ಸರ್ವತೋಮುಖ ಅಭಿವೃದ್ಧಿ ವಾತಾವರಣವನ್ನು ಒದಗಿಸುವ ಅದರ ಬದ್ಧತೆಗೆ ಅನುಗುಣವಾಗಿದೆ. ಎಲ್‌’ಕೆಜಿಯಿಂದ 8ನೇ ತರಗತಿವರೆಗಿನ ಅವಧಿಯ ಬೋರ್ಡರ್ ಮಗುವಿನ ವಾರ್ಷಿಕ ಶುಲ್ಕವು ಸುಮಾರು 4.40 ಲಕ್ಷ ರೂಪಾಯಿಗಳು. ಮತ್ತು 9 ರಿಂದ 12 ನೇ ತರಗತಿಯವರೆಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಚಳಿಗಾಲದ ಸಮವಸ್ತ್ರ ಮತ್ತು ಕ್ರೀಡಾ ಉಡುಪುಗಳನ್ನು ಒಳಗೊಂಡಂತೆ ಸುಮಾರು 4.80 ಲಕ್ಷ ರೂ. ಪಾವತಿಸಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link