ಅಂಬಾನಿಯ ʻಅಂಟಿಲಿಯಾʼನಿರ್ಮಿಸಲು ಎಷ್ಟು ವರ್ಷ ಬೇಕಾಯಿತು ಗೊತ್ತಾ? ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ!
ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿ, ಇವರು ವಾಸಿಸುವ ಮನೆ ಅಂಟೀಲಿಯಾ ಮುಂಬೈನಲ್ಲಿದೆ, ದುಬಾರಿ ಐಶಾರಾಮಿ ಮನೆ ಇದಾಗಿದ್ದು, ಈ ಮನೆ ಕಟ್ಟಲು ಖರ್ಚಾಗಿದ್ದು ಎಷ್ಟು ಕೋಟಿ? ಈ ಬಂಗಲೆಯನ್ನು ನಿರ್ಮಿಸಲು ತೆಗೆದುಕೊಂಡಿದ್ದು ಎಷ್ಟು ವರ್ಷ? ತಿಳಿಯುವ ಕುತೂಹಲ ನಿಮಗೂ ಇದೆಯಾ? ಈ ಸ್ಟೋರಿ ಓದಿ...
27 ಅಂತಸ್ತಿನ ಈ ಕಟ್ಟಡವನ್ನು ಮುಕೇಶ್ ಅಂಬಾನಿ ಕುಟುಂಬ ಮಾತ್ರ ನಿರ್ವಹಿಸುತ್ತಿದೆ. ಆದರೆ ಈ ಮನೆ ನಿರ್ಮಾಣಕ್ಕೆ ಆಗಿರುವ ವೆಚ್ಚ 15 ಸಾವಿರ ಕೋಟಿ ರೂ ಇದು ಒಟ್ಟು 27 ಮಹಡಿಗಳನ್ನು ಹೊಂದಿದ್ದು, 173 ಮೀಟರ್ (568 ಅಡಿ) ಎತ್ತರವಾಗಿದೆ. ಇಡೀ ಮನೆಯನ್ನು 37,000 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ.
ಆಂಟಿಲಿಯಾ 168 ಕಾರ್ ಗ್ಯಾರೇಜ್‌ಗಲನ್ನು ಒಳಗೊಂಡಿದ್ದು, 9 ಹೈ ಸ್ಪೀಡ್ ಲಿಫ್ಟ್ ಥಿಯೇಟರ್, ಟೆರೇಸ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್, ಸ್ಪಾ, ಆರೋಗ್ಯ ಕೇಂದ್ರ ಇತ್ಯಾದಿಗಳನ್ನು ಹೊಂದಿದೆ.
ಆಂಟಿಲಿಯಾವನ್ನು ಪರ್ಕಿನ್ಸ್ & ವಿಲ್ ಮತ್ತು ಲಾಸ್ ಏಂಜಲೀಸ್ ಮೂಲದ ನಿರ್ಮಾಣ ಸಂಸ್ಥೆ ಹಿರ್ಷ್ ಬೆಟ್ನರ್‌ನವರು ನಿರ್ಮಾಣ ಮಾಡಿದ್ದಾರೆ.
ಇನ್ನೂ ಈ ಮನೆಯ ನಿರ್ಮಾಣವು 2006 ರಲ್ಲಿ ಪ್ರಾರಂಭವಾಗಿದ್ದು, 2010 ರಲ್ಲಿ ಪೂರ್ಣಗೊಂಡಿತ್ತು ಹಾಗೆ ನೋಡಿದರೆ ಈ ಮನೆಯನ್ನು ನಿರ್ಮಿಸೋಕೆ ಬೇಕಾಗಿದ್ದು ಸರಿ ಸುಮಾರು ನಾಲ್ಕು ವರ್ಷ.
ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮನೆಯ ಅತಿಥಿಗಳಿಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಮನೆಯ ಹಾಲ್ ವಿಶೇಷ ಸೋಫಾಗಳನ್ನು ಹೊಂದಿದೆ ಮತ್ತು ಉತ್ತಮ ಗುಣಮಟ್ಟದ ಚಿತ್ರಕಲೆಯಿದೆ.
ಈ ಮನೆಯನ್ನು ನಿರ್ಮಿಸಿದ ಸಂಸ್ಥೆ ಚಿಕಾಗೋದಲ್ಲಿರುವ ಪರ್ಕಿನ್ಸ್ ಮತ್ತು ವಿಲ್. ಈ ಕಂಪನಿಯ CEO ಬಿಲ್ ಹ್ಯಾರಿಸನ್, ಬ್ರಿಟಿಷ್ ಉದ್ಯಮಿ. ಬಿಲ್ ಹ್ಯಾರಿಸನ್ ಮೈಕ್ರೋಸಾಫ್ಟ್ ನ ಉಪಾಧ್ಯಕ್ಷ ಮತ್ತು ಗೂಗಲ್ ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಬಿಲ್ ಹ್ಯಾರಿಸನ್ ಅವರು 1989 ರಿಂದ 1992 ರವರೆಗೆ ಮೈಂಡ್‌ಸ್ಕೇಪ್ ಇಂಟರ್‌ನ್ಯಾಷನಲ್‌ನಲ್ಲಿ ಡೆವಲಪ್‌ಮೆಂಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬಿಲ್ ಹ್ಯಾರಿಸನ್ ತನ್ನ ಕುಟುಂಬದೊಂದಿಗೆ ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು.
27 ಅಂತಸ್ತಿನ ಆಂಟಿಲಿಯಾ ಐಷಾರಾಮಿ ಮನೆಯಲ್ಲಿ ಒಟ್ಟು 600 ಮಂದಿ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾನ್ಯ ಜನರಲ್ಲ. ಉನ್ನತ ಶಿಕ್ಷಣ ಪಡೆದವರು. ಕಸ ಗುಡಿಸಲು, ಬಟ್ಟೆ ಒಗೆಯಲು, ಅಡುಗೆ ಮಾಡಲು ಹಲವರನ್ನು ಪ್ರತ್ಯೇಕವಾಗಿ ನೇಮಿಸಲಾಗಿದೆ.
ಅಂಬಾನಿ ಮನೆಯಲ್ಲಿ ಕೆಲಸ ಬೇಕಾದರೆ ಅದೃಷ್ಟ ಖುಲಾಯಿಸಲೇ ಬೇಕು. ಏಕೆಂದರೆ ಇಲ್ಲಿನ ಕಾರ್ಮಿಕರ ಸಂಬಳ ಮಾಮೂಲಿಯಾಗಿಲ್ಲ. ಅವು ಲಕ್ಷಗಳಲ್ಲಿವೆ. ಇಲ್ಲಿ ಕೆಲಸಗಾರನಾಗಿ ಕೆಲಸ ಮಾಡಲು ಎಲ್ಲಾ ಅರ್ಹತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಮೇಲಾಗಿ ಇಲ್ಲಿನ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವುದಲ್ಲದೆ ಆರೋಗ್ಯ ವಿಮೆ ಮತ್ತಿತರ ಸೌಲಭ್ಯಗಳೂ ಇವೆ. ಆಂಟಿಲಿಯಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಹ ತರಬೇತಿ ಪಡೆದಿದ್ದಾರೆ. ಕಾರ್ಮಿಕರಿಗೆ ಪ್ರತ್ಯೇಕ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.