ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!
ತಮನ್ನಾ ಭಾಟಿಯಾ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಟಿಸುವ ನಟಿ ಇವರು ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ನಟಿಸಲು ಕೋಟಿಗಟ್ಟಲೆ ಹಣವನ್ನು ಪಡೆಯುತ್ತಾರೆ ಆದರೆ ಇವರು ಒಂದು ಐಟಂ ಸಾಂಗ್ ನಲ್ಲಿ ನಟಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಎಂದು ಕೇಳಿದರೆ ಶಾಕ್ ಆಗುವುದು ಖಂಡಿತ
ನಟಿ ಕೇವಲ ಸಿನಿಮಾದಿಂದ ಮಾತ್ರವಲ್ಲದೆ ಬೇರೆ ಬೇರೆ ಕಡೆಯಿಂದ ಆದಾಯವನ್ನು ಗಳಿಸುತ್ತಾರೆ ನಟಿ ಸಿನಿಮಾದಿಂದ ಕೋಟಿ ಗಳಿಸಿದರೆ,ತಮನ್ನಾ ಬಾಡಿಗೆ ಮೂಲಕವೂ ಲಕ್ಷ ರೂಪಾಯಿ ಎಣಿಸುತ್ತಿದ್ದಾರೆ
ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡವನ್ನು ಬಾಡಿಗೆ ನೀಡಿದ್ದಾರೆ, ಈ ಕಟ್ಟಡದಿಂದ ಪ್ರತಿ ತಿಂಗಳು 18 ಲಕ್ಷ ರೂಪಾಯಿ ಬಾಡಿಗೆಯನ್ನು ಪಡೆಯುತ್ತಾರೆ.
ತಮನ್ನಾ ಮುಂಬೈನ ಜುಹು ವರ್ಸೋವಾ ರಸ್ತೆಯಲ್ಲಿರುವ ಬೆವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಹೊಂದಿದ್ದು, 14ನೇ ಮಹಡಿಯಲ್ಲಿರುವ ಈ ಮನೆಯಲ್ಲಿ ತಮನ್ನಾ ವಾಸವಿದ್ದಾರೆ. ಇದನ್ನು 16 ಕೋಟಿ ರೂಪಾಯಿಗೆ ತಮನ್ನಾ ಖರೀದಿಸಿದ್ದು, 9 ವರ್ಷಗಳಿಂದ ತಮನ್ನಾ ಇದೇ ಮನೆಯಲ್ಲಿ ವಾಸವಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಚಿತ್ರದಲ್ಲಿ ಅಭಿನಯಿಸಲು 5 ರಿಂದ 7 ಕೋಟಿ ರೂಪಾಯಿ ಪಡೆದುಕೊಂಡರೆ, ಇನ್ನು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.