ಟಿ20 ವಿಶ್ವಕಪ್ ಗೆದ್ದ ವಿಜೇತ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ? ತಿಳಿದರೆ ಹುಬ್ಬೇರುವುದು ಗ್ಯಾರಂಟಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024ರ ಫೈನಲ್’ಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು (ಜೂನ್ 29) ನಡೆಯಲಿರುವ ಈ ಅಮೋಘ ಪಂದ್ಯದ ವಿಜೇತ ತಂಡಕ್ಕೆ ಹಣದ ಸುರಿಮಳೆಯಾಗಲಿದೆ.
ಈ ಪಂದ್ಯದಲ್ಲಿ ಸೋತ ತಂಡ, ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗದಿದ್ದರೂ ಹಣದ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಸೋತ ತಂಡದ (ರನ್ನರ್ ಅಪ್) ಮೇಲೂ ನೋಟುಗಳ ಭಾರೀ ಮಳೆಯಾಗಲಿದೆ. ವಿಜೇತ ಮತ್ತು ರನ್ನರ್ ಅಪ್ ತಂಡಗಳು ಎಷ್ಟು ಬಹುಮಾನ ಮೊತ್ತ ಪಡೆಯಲಿದೆ ಎಂಬುದನ್ನು ತಿಳಿಯೋಣ.
2024ರ ಟಿ20 ವಿಶ್ವಕಪ್ ವಿಜೇತ ತಂಡದ ಬಹುಮಾನ ಮೊತ್ತವನ್ನು ಐಸಿಸಿ ಈಗಾಗಲೇ ಪ್ರಕಟಿಸಿತ್ತು. ಈ ಋತುವಿನ ವಿಜೇತರು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ ಬಹುಮಾನವನ್ನು ಪಡೆಯಲಿದ್ದಾರೆ.
T20 ವಿಶ್ವಕಪ್ 2024 ಗಾಗಿ ಒಟ್ಟು $11.25 ಮಿಲಿಯನ್ ಬಹುಮಾನ ನಿಧಿಯನ್ನು ICC ಪ್ರಕಟಿಸಿದೆ. ಇದರಲ್ಲಿ ವಿಜೇತ ತಂಡಕ್ಕೆ 2.45 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 20.36 ಕೋಟಿ ರೂ.) ಸಿಗಲಿದೆ. ಸೋತ ತಂಡ ಅಂದರೆ ರನ್ನರ್ ಅಪ್ ತಂಡ 1.28 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 10.64 ಕೋಟಿ ರೂ.) ಪಡೆಯಲಿದೆ.
ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲ, ಸೆಮಿಫೈನಲ್ ತಲುಪುವ ತಂಡಗಳು ಸಹ ಕೋಟಿ ಕೋಟಿ ಬಹುಮಾನ ಪಡೆಯುತ್ತವೆ. ಸೆಮಿಫೈನಲ್ ತಲುಪುವ ತಂಡಗಳಿಗೆ $787,500 (ಭಾರತೀಯ ಕರೆನ್ಸಿಯಲ್ಲಿ ಸುಮಾರು 6.54 ಕೋಟಿ ರೂ.) ಸಮಾನ ಮೊತ್ತವನ್ನು ನೀಡಲಾಗುತ್ತದೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇಷ್ಟು ಮೊತ್ತವನ್ನು ಪಡೆಯಲಿವೆ.
ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅನ್ನು ಭಾರತವು ಸೋಲಿಸಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಐಸಿಸಿ ಎಲ್ಲಾ ತಂಡಗಳಿಗೆ ಬಹುಮಾನದ ಹಣವನ್ನು ಇರಿಸಿದೆ.
ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲ, ಸೆಮಿಫೈನಲ್ ತಲುಪುವ ತಂಡಗಳು ಸಹ ಕೋಟಿಗಳನ್ನು ಪಡೆಯುತ್ತವೆ. ಸೆಮಿಫೈನಲ್ ತಲುಪುವ ತಂಡಗಳಿಗೆ $787,500 (ಭಾರತೀಯ ಕರೆನ್ಸಿಯಲ್ಲಿ ಸುಮಾರು 6.54 ಕೋಟಿ ರೂ.) ಸಮಾನ ಮೊತ್ತವನ್ನು ನೀಡಲಾಗುತ್ತದೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇಷ್ಟು ಮೊತ್ತವನ್ನು ಪಡೆಯಲಿವೆ.
ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅನ್ನು ಭಾರತವು ಸೋಲಿಸಿತು. ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಐಸಿಸಿ ಎಲ್ಲಾ ತಂಡಗಳಿಗೆ ಬಹುಮಾನದ ಹಣವನ್ನು ಇರಿಸಿದೆ.
ಸೂಪರ್-8 (ಎರಡನೇ ಸುತ್ತು) ತಲುಪಲು ಯಶಸ್ವಿಯಾದ ತಂಡಗಳು $382,500 (ಭಾರತೀಯ ಕರೆನ್ಸಿಯಲ್ಲಿ ಸುಮಾರು 3.17 ಕೋಟಿ ರೂ.) ಪಡೆಯಲಿವೆ.
ಭಾರತೀಯ ಕರೆನ್ಸಿಯಲ್ಲಿ ವಿಜೇತರು ಅಂದಾಜು 20.36 ಕೋಟಿ ರೂ, ರನ್ನರ್ ಅಪ್ ಸುಮಾರು 10.64 ಕೋಟಿ ರೂ, ಸೆಮಿಫೈನಲ್ ತಲುಪಿದ ತಂಡಗಳು ಅಂದಾಜು 6.54 ಕೋಟಿ ರೂ, ಸೂಪರ್-8 ತಲುಪಿದ ತಂಡಗಳು ಅಂದಾಜು 3.17 ಕೋಟಿ ರೂ, 9 ರಿಂದ 12 ನೇ ಸ್ಥಾನದಲ್ಲಿರುವ ತಂಡಗಳು ಅಂದಾಜು 2.05 ಕೋಟಿ ರೂ., 13 ರಿಂದ 20 ನೇ ಸ್ಥಾನದಲ್ಲಿರುವ ತಂಡಗಳು 1.87 ಕೋಟಿ ರೂ. ಪಡೆಯಲಿವೆ.