ಅಪ್ಪು ಸಿನಿಮಾಗೆ ಪುನೀತ್‌ ರಾಜ್‌ಕುಮಾರ್‌ ಪಡೆದಿದ್ದ ಸಂಭಾವನೆ ಇದು! ಆ ಹಣವನ್ನು ಅವರು ಏನು ಮಾಡಿದ್ರು ಗೊತ್ತಾ?

Sat, 09 Nov 2024-3:31 pm,

ನಟ ಪುನೀತ್‌ ರಾಜ್‌ಕುಮಾರ್‌ ಕೇವಲ ಆರು ತಿಂಗಳ ಮಗು ಇದ್ದಾಗಲೇ ತಂದೆಯವರ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು..    

ನಂತರ ತಮ್ಮ ವಿದ್ಯಾಭ್ಯಾಸ ಮುಗಿಸಿ ನಟ ಪುನೀತ್‌ ರಾಜ್‌ಕುಮಾರ್‌ 2002ರಲ್ಲಿ ಪೂರಿ ಜಗನ್ನಾಥ್ ಅವರ ಅಪ್ಪು ಸಿನಿಮಾದ ಮೂಲಕ ಗ್ರ್ಯಾಂಡ್‌ ಆಗಿ ಬೆಳ್ಳಿತೆರೆಗೆ ಕಾಲಿಟ್ಟರು..     

ನಟಿ ರಕ್ಷಿತಾ ಅಪ್ಪು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.. ಮೊದಲ ಸಿನಿಮಾದಲ್ಲೇ ದೊಡ್ಡ ಸಕ್ಸಸ್‌ ಕಂಡ ಅಪ್ಪು ಅವರಿಗೆ ಹಿಂದಿರುಗಿ ನೋಡುವ ಸಂದರ್ಭಗಳೇ ಬರಲಿಲ್ಲ..     

 ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಅಪ್ಪು ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪುಗಳಿಂದ ಅವರು ಅಭಿಮಾನಿಗಳ ಹೃದಯದಲ್ಲಿ ಅಜರಾಮರ..    

ಪುನೀತ್‌ ಅವರು ನಟಿಸಿದ ಅಪ್ಪು ಸಿನಿಮಾವನ್ನು  ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದರೂ ತಾಯಿ ಪಾರ್ವತಮ್ಮನವರು ಹಣಹೂಡಿಕೆ ಮಾಡಿದ್ದರು..    

ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿದ್ದರಿಂದ ಪಾರ್ವತಮ್ಮನವರು ೫೦೦೦೦ ನೀಡಲು ಹೋದಾಗ ಅಪ್ಪು ನನ್ನ ಮೊದಲ ಸಂಭಾವನೆ ನನ್ನ ಮಾತೃದೇವತೆಗೆ ಸಮಪರ್ಣೆ ಎಂದು ಅವರಿಗೆ ಮರುನೀಡಿದ್ದರಂತೆ..     

ZEENEWS TRENDING STORIES

By continuing to use the site, you agree to the use of cookies. You can find out more by Tapping this link