ಸಚಿನ್ ತೆಂಡೂಲ್ಕರ್ ಒಂದು ನಿಮಿಷದ ಆದಾಯ ಎಷ್ಟು ಗೊತ್ತಾ? ಸಾಮಾನ್ಯ ಆಟಗಾರರ ತಿಂಗಳ ವೇತನಕ್ಕಿಂತ ಹೆಚ್ಚೇ..!
ಇಂದಿಗೂ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ಹೆಸರು ಕೇಳುತ್ತಿದ್ದಂತೆ ಏನೋ ಒಂದು ರೀತಿಯ ರೋಮಾಂಚನವಾಗುತ್ತೆ, ಅವರ ಆಟದ ವೈಖರಿಯೇ ನೆನೆಪಿಗೆ ಬರುತ್ತೆ. ಇಂದು ನಾವು ಈ ವರದಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಆದಾಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಜೊತೆಗೆ ಕೇವಲ ಒಂದು ನಿಮಿಷದಲ್ಲಿ ಅವರು ಗಳಿಕೆ ಮಾಡುವ ಹಣ ಎಷ್ಟು ಎಂಬುದು ತಿಳಿದುಕೊಳ್ಳೋಣ.
ಕೇವಲ ಭಾರತವಲ್ಲ, ಇಡೀ ಜಗತ್ತಿನ ಗಮನ ಸೆಳೆದ ಸಚಿನ್ ತೆಂಡೂಲ್ಕರ್ ಸದ್ಯ ತಮ್ಮ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿ ಸರಿಸುಮಾರು 10 ವರ್ಷಗಳು ಕಳೆದಿವೆ. ಇವರು ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಅಂದಹಾಗೆ ಸಚಿನ್ ಅವರ ನಿವ್ವಳ ಮೌಲ್ಯವು ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗಿಂತ ಹೆಚ್ಚಾಗಿದೆ. ಇವರ ಸಾಮಾಜಿಕ ಜಾಲತಾಣಗಳಿಂದಲೂ ಆದಾಯ ಗಳಿಸುವುದಲ್ಲದೆ, ಹಲವು ಕಂಪನಿಗಳ ರಾಯಭಾರಿಯೂ ಆಗಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯ 1 ಸಾವಿರದ 350 ಕೋಟಿ ರೂಪಾಯಿ. 2019ರಲ್ಲಿ ಡಫ್ ಮತ್ತು ಫೆಲ್ಪ್ಸ್ ಬಿಡುಗಡೆ ಮಾಡಿರುವ ವರದಿಯ ಅನುಸಾರ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಸಚಿನ್ ಮಾತ್ರ ನಿವೃತ್ತ ಸೆಲೆಬ್ರಿಟಿ ಆಗಿದ್ದರು. ಇವರ ಬ್ರ್ಯಾಂಡ್ ಮೌಲ್ಯವು 15.8 ಶೇಕಡದಷ್ಟು ಹೆಚ್ಚಾಗಿತ್ತು. ಆದರೆ 2020ರಲ್ಲಿ ಇದ್ದ 834 ಕೋಟಿ ನಿವ್ವಳ ಮೌಲ್ಯ, ಈಗ 1 ಸಾವಿರದ 350 ಕೋಟಿ ತಲುಪಿದೆ ಎಂದು ಹೇಳಲಾಗುತ್ತಿದೆ.
ಬಿಎಂಡಬ್ಲ್ಯೂ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ರಾಯಭಾರಿ ಆಗಿರುವ ಸಚಿನ್ ತೆಂಡೂಲ್ಕರ್, ಇದರಿಂದಲೇ 20 ರಿಂದ 22 ಕೋಟಿ ಆದಾಯ ಗಳಿಸುತ್ತಾರಂತೆ. ಅಷ್ಟೇ ಅಲ್ಲದೆ, 2016ರಲ್ಲಿ ಬಟ್ಟೆ ಉದ್ಯಮಕ್ಕೂ ಕಾಲಿಟ್ಟ ಅವರು, ಟ್ರೂ ಬ್ಲೂ ಬ್ರ್ಯಾಂಡ್ ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ಉದ್ಯಮ ಇದೀಗ ಯುಎಸ್ ಮತ್ತು ಇಂಗ್ಲೆಂಡ್‌ನಲ್ಲಿಯೂ ಇದೆ.
ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ರೆಸ್ಟೋರೆಂಟ್ಸ್, ಮನರಂಜನೆ ಮತ್ತು ತಂತ್ರಜ್ಞಾನ ಕಂಪನಿಗಳಲ್ಲೂ ಹೂಡಿಕೆ ಸೇರಿದಂತೆ ಅನೇಕ ರೀತಿಯಲ್ಲಿ ಆದಾಯ ಗಳಿಸುತ್ತಿರುವ ಮಾಸ್ಟರ್ ಬ್ಲ್ಯಾಸ್ಟರ್ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದರ ಅಂದಾಜು ವೆಚ್ಚ 100 ಕೋಟಿ.
ಇದರ ಹೊರತಾಗಿ ಲಂಡನ್’ನಲ್ಲಿಯೂ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದರ ಜೊತೆಗೆ ಸುಮಾರು 20 ಕೋಟಿ ಮೌಲ್ಯದ 10 ಕಾರುಗಳು ಅವರ ಬಳಿ ಇದೆ. ಸಚಿನ್ ಪ್ರತೀ ತಿಂಗಳಿಗೆ ಬರೋಬ್ಬರಿ 4 ಕೋಟಿ ಸಂಪಾದಿಸುತ್ತಾರೆ. ಅಂದರೆ ದಿನಕ್ಕೆ 13.33 ಲಕ್ಷ, ನಿಮಿಷಕ್ಕೆ 55 ರಿಂದ 56 ಸಾವಿರ ಗಳಿಸುತ್ತಾರೆ ಎಂದರ್ಥ.