Team India ನಾಯಕ ರೋಹಿತ್ ಶರ್ಮಾ ಪ್ರತೀ ಪಂದ್ಯಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಶಾಕ್ ಆಗೋದು ಪಕ್ಕಾ

Sun, 23 Apr 2023-6:42 pm,

ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷಾಂತ್ಯದಲ್ಲಿ ರೋಹಿತ್ ಶರ್ಮಾ ಅವರ ನಿವ್ವಳ ಮೌಲ್ಯ US $ 26 ಮಿಲಿಯನ್ ಅಥವಾ 214 ಕೋಟಿ ರೂ. ಇತ್ತು. ಬಿಸಿಸಿಐ ರೋಹಿತ್ ಶರ್ಮಾಗೆ ವಾರ್ಷಿಕ 7 ಕೋಟಿ ರೂ. ವೇತನ ನೀಡುತ್ತದೆ. ಇದಲ್ಲದೇ ಟೆಸ್ಟ್ ಪಂದ್ಯಗಳಿಗೆ 15 ಲಕ್ಷ, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ 5 ಲಕ್ಷ ಹಾಗೂ ಟಿ20 ಮಾದರಿಗೆ 3 ಲಕ್ಷ ರೂ.ನಿಗದಿ ಪಡಿಸಲಾಗಿದೆ.

ರೋಹಿತ್ ಶರ್ಮಾ 2008 ರಿಂದ ಐಪಿಎಲ್ ಆಡುತ್ತಿದ್ದಾರೆ. ಕಳೆದ ವರ್ಷ ಐಪಿಎಲ್‌’ನಲ್ಲಿ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಮುಂಬೈ ಇಂಡಿಯನ್ಸ್ 16 ಕೋಟಿ ರೂ. ಪಾವತಿಸಿತ್ತು.

ರೋಹಿತ್ ಶರ್ಮಾ ಅವರು ಐಷಾರಾಮಿ ಕಾರುಗಳು ಮತ್ತು ಬೈಕ್‌’ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಇತ್ತೀಚೆಗೆ ರೂ. 3.15 ಕೋಟಿ ಬೆಲೆಯ ಲಂಬೋರ್ಗಿನಿ ಉರಸ್ ಎಸ್ ಅನ್ನು ಖರೀದಿಸಿದ್ದಾರೆ. ಇದಲ್ಲದೇ ರೋಹಿತ್ ಬಳಿ ಟೊಯೊಟಾ ಫಾರ್ಚುನರ್, ಬಿಎಂಡಬ್ಲ್ಯು-ಎಕ್ಸ್3, ಬಿಎಂಡಬ್ಲ್ಯು ಎಂ5 ನಿಸ್ಸಾನ್, ಮರ್ಸಿಡಿಸ್ ಮತ್ತು ಆಡಿಯಂತಹ ಐಷಾರಾಮಿ ವಾಹನಗಳಿವೆ.

ರೋಹಿತ್ ಶರ್ಮಾ ಅವರು ಮುಂಬೈನ ಐಷಾರಾಮಿ ಪ್ರದೇಶವಾದ ವರ್ಲಿಯಲ್ಲಿ ಸುಮಾರು ₹30 ಕೋಟಿ ಮೌಲ್ಯದ ಸಮುದ್ರ ಬದಿಯ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ 4BHK ಫ್ಲಾಟ್‌’ನ ಒಟ್ಟು ವಿಸ್ತೀರ್ಣ ಸುಮಾರು 6,000 ಚದರ ಅಡಿ ಎಂದು ಹೇಳಲಾಗುತ್ತದೆ. ರೋಹಿತ್ ಅಹುಜಾ ಟವರ್ಸ್‌’ನ 53 ಅಂತಸ್ತಿನ ಅಪಾರ್ಟ್‌ಮೆಂಟ್‌’ನಲ್ಲಿ 29 ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ರೋಹಿತ್ ಶರ್ಮಾ ಬ್ರ್ಯಾಂಡ್ ಎಂಡಾರ್ಸ್‌’ಮೆಂಟ್‌’ನಿಂದ ಉತ್ತಮ ಆದಾಯವನ್ನು ಗಳಿಸುತ್ತಾರೆ. ಪ್ರಸ್ತುತ ಸುಮಾರು 24 ಬ್ರ್ಯಾಂಡ್‌’ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕಾಗಿ ರೋಹಿತ್ ಶರ್ಮಾ ಒಂದೊಂದು ಬ್ರಾಂಡ್ ನಿಂದ ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link