ಈ ಬಾಲಿವುಡ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣಿಸುತ್ತಾರೆ ಗೊತ್ತಾ? ಶಾಕ್ ಆಗೋದು ಗ್ಯಾರಂಟಿ!
ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರು ಭಾರತೀಯ ಚಿತ್ರರಂಗದ ಅದ್ಭುತ ನಟಿ ಜೊತೆಗೆ ನೃತ್ಯಗಾರ್ತಿಯೂ ಹೌದು. ಇವರು ಮೇಕಪ್ ಇಲ್ಲದೆ ಹೇಗೆ ಕಾಣಿಸುತ್ತಾರೆ ನೋಡಿ.
ಐಶ್ವರ್ಯಾ ರೈ ಬಚ್ಚನ್ ಸಾರ್ವಕಾಲಿಕ ಅತ್ಯಂತ ಸುಂದರ ಬಾಲಿವುಡ್ ನಟಿಯರಲ್ಲಿ ಒಬ್ಬರಾಗಿದ್ದಾರೆ. 1994 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಸಹ ಗೆದ್ದಿದ್ದಾರೆ. ಆದರೆ ಮೇಕಪ್ ಇಲ್ಲದೆ ಅವರ ತ್ವಚೆ ಹೇಗೆ ಕಾಣಿಸುತ್ತದೆ ನೋಡಿ.
ಪ್ರಿಯಾಂಕ ಚೋಪ್ರಾ ಇದೀಗ ಹಾಲಿವುಡ್ ನಲ್ಲಿ ಸಹ ಮಿಂಚುತ್ತಿದ್ದಾರೆ. ಜಾಗತಿಕ ತಾರೆಯ ಮೇಕಪ್ ಇಲ್ಲದ ಲುಕ್ ಹೀಗಿದೆ.
ಬಾಲಿವುಡ್‌ನ ಪ್ರಮುಖ ನಟಿ ಕರೀನಾ ಕಪೂರ್ ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಶ್ರೇಷ್ಠತೆಯಿಂದ ಜನಮನವನ್ನು ಗೆದ್ದಿದ್ದಾರೆ.
2005 ರಲ್ಲಿ ಬಾಲಿವುಡ್ ಉದ್ಯಮವನ್ನು ತನ್ನ ಚೊಚ್ಚಲ ಪ್ರವೇಶದಿಂದ ಆಳಿದ ಬ್ರಿಟಿಷ್ ಸುಂದರಿ ಕತ್ರಿನಾ ಕೈಫ್ ಮೇಕಪ್ ಇಲ್ಲದೆಯೂ ಸುಂದರವಾಗಿದ್ದಾರೆ.
ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿದರು. ಇದು ಮೇಕ್ಅಪ್ ಇಲ್ಲದೆ ದೀಪಿಕಾ ಕಾಣಿಸಿಕೊಂಡ ಪರಿ
ಬಾಲಿವುಡ್ ನಟಿ ಕಂಗನಾ ರನೌತ್, 2006 ರಲ್ಲಿ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಗ್ಯಾಂಗ್‌ಸ್ಟರ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದ ಅವರು, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ.
ಬಾಲಿವುಡ್‌ನ ಫಿಟ್‌ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ 47 ವರ್ಷ. ಅವರ ವಿದೌಟ್ ಮೇಕಪ್ ಲುಕ್ ಹೇಗಿದೆ ನೋಡಿ.
ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಪ್ರತಿಭಾವಂತ ನಟಿ. ಕೇವಲ ಆಕೆಯ ನಟನೆಯಿಂದ ಮಾತ್ರವಲ್ಲದೆ ಮಾತಿನ ಸ್ವಭಾವದಿಂದಲೂ ಜನರು ಅವರನ್ನು ಪ್ರೀತಿಸುತ್ತಾರೆ..
ರಾಣಿ ಮುಖರ್ಜಿ 2000ರ ದಶಕದ ಆರಂಭದಲ್ಲಿ ಉದ್ಯಮವನ್ನು ಆಳಿದ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.
ಶ್ರದ್ಧಾ ಕಪೂರ್ ಆಕರ್ಷಕ ಸೌಂದರ್ಯ ಹಾಗೂ ಸೌಮ್ಯ ನಡವಳಿಕೆಯಿಂದಾಗಿ ಸುದ್ದಿಯಲ್ಲಿರುತ್ತಾರೆ. ಅವರ ಮೇಕಪ್ ಇಲ್ಲದ ಫೋಟೋ ಇಲ್ಲಿದೆ.
ನಟಿ ಸೋನಂ ಕಪೂರ್ ಯಾವಾಗಲೂ ತಮ್ಮ ಸ್ಟೈಲ್ ಮತ್ತು ಡ್ರೆಸ್ಸಿಂಗ್‌ನಿಂದ ಜನಮನದಲ್ಲಿರುತ್ತಾರೆ. ಇದೀಗ ಮೇಕಪ್ ಇಲ್ಲದ ನೋಟದಲ್ಲಿಯೂತುಂಬಾ ಮುದ್ದಾಗಿ ಕಾಣುತ್ತಾರೆ.
ತಬಸ್ಸುಮ್ ಫಾತಿಮಾ ಹಶ್ಮಿ. ಇವರು ಸಿನಿಮಾ ಕ್ಷೇತ್ರಕ್ಕೆ ಬಂದ ಬಳಿಕ ಟಬು ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ. ಆದರೆ ಮೇಕಪ್ ಇಲ್ಲದೆ ಅವರ ಮುಖ ಹೇಗೆ ಕಾಣಿಸುತ್ತಿದೆ ನೋಡಿ.
ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಮಲೈಕಾ ಅರೋರಾ ಅನೇಕ ಫಿಟ್‌ನೆಸ್ ಪ್ರಿಯರಿಗೆ ಐಕಾನ್ ಆಗಿದ್ದಾರೆ. ನೃತ್ಯ, ಯೋಗ ಮತ್ತು ಜಿಮ್‌ನ ಮೂಲಕ ತನ್ನನ್ನು ತಾನು ಚೆನ್ನಾಗಿ ನಿರ್ವಹಿಸಿಕೊಂಡಿದ್ದಾರೆ. ಇನ್ನು ಮೇಕಪ್ ಇಲ್ಲದ ನೋಟದಲ್ಲಿ ತಾಜಾವಾಗಿ ಕಾಣುತ್ತಾರೆ.