ನಿಮ್ಮ ಮುಖದ ಅಂದದ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?
ಮನೆಯಲ್ಲಿಯೇ ಕೆಲ ಫೇಸ್‌ಪ್ಯಾಕ್‌ಗಳನ್ನು ತಯಾರಿಸಿಕೊಳ್ಳಿ. ಅದು ನಿಮ್ಮ ಮುಖದ ಅಂದದ ಜೊತೆಗೆ ಆರೋಗ್ಯವನ್ನೂ ಕಾಪಾಡಬಹುದು.
ಬೇಳೆಕಾಳುಗಳ ಬಳಕೆಯು ಚರ್ಮದ ಮೇಲೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಕುತ್ತಿಗೆಯ ಮೇಲೆ ಲೇಪಿಸಿ. ಬಳಿಕ 20 ನಿಮಿಷಗಳ ನಂತರ ಚೆನ್ನಾಗಿ ನೀರಿನಿಂದ ತೊಳೆಯಿರಿ.
ಆಪಲ್ ಸೈಡರ್ ವಿನೆಗರ್ ಸುಕ್ಕುಗಳನ್ನು ತೆಗೆಯಲು ಸಹಕಾರಿಯಾಗಿದೆ. ಆಪಲ್ ಸೈಡರ್ ವಿನೆಗರ್ ಅಲ್ಫಾ ಹೈಡ್ರಾಕ್ಸಿಲ್ ಆಮ್ಲವನ್ನು ಹೊಂದಿದ್ದು, ಇದು ಡೆಡ್‌ಸ್ಕಿನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.