ವಿರಾಟ್-ಅನುಷ್ಕಾ ತಮ್ಮ ಮೊಬೈಲ್’ನಲ್ಲಿ ಪರಸ್ಪರ ಹೆಸರನ್ನು ಹೇಗೆ ಸೇವ್ ಮಾಡಿಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ನಕ್ಕು ನಕ್ಕು ಸುಸ್ತಾಗೋದು ಗ್ಯಾರಂಟಿ

Fri, 24 May 2024-4:06 pm,

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದವರು. ಈ ಜೋಡಿ ಅದೆಷ್ಟೋ ಮಂದಿಗೆ ಪ್ರೇರಣೆಯೂ ಆಗಿದ್ದಾರೆ.

ಅಂದಹಾಗೆ ಈ ಜೋಡಿ ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ತಮಾಷೆಯಾಗಿದೆ.

ಅಂತಹ ಒಂದು ವೀಡಿಯೊದಲ್ಲಿ, ಅನುಷ್ಕಾ ಶರ್ಮಾ ಅವರು ತಮ್ಮ ಫೋನ್‌’ನಲ್ಲಿ ವಿರಾಟ್ ಕೊಹ್ಲಿ ನಂಬರ್ ಅನ್ನು ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ, ಅದರಲ್ಲಿ ಒಂದು ಟ್ವಿಸ್ಟ್ ಇದೆ. ಮತ್ತು ಈ ಘಟನೆಯಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಜೋಡಿ ತಪ್ಪು ಉತ್ತರಗಳನ್ನು ನೀಡಬೇಕಾಗಿತ್ತು.

ಅನುಷ್ಕಾ ಶರ್ಮಾ ಅವರ ಬಳಿ, “ಫೋನ್‌’ನಲ್ಲಿ ಯಾವ ಹೆಸರಿನಿಂದ ವಿರಾಟ್ ಹೆಸರನ್ನು ಸೇವ್ ಮಾಡಿದ್ದೀರಿ?” ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ  ನಿಮ್ಮ ನಟಿ 'ಪತಿ ಪರಮೇಶ್ವರ್' ಎಂದು ಹೇಳಿ ನಕ್ಕಿದ್ದಾರೆ.

ವಿರಾಟ್ ಕೊಹ್ಲಿಗೂ ಇದೇ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರವಾಗಿ 'ಡಾರ್ಲಿಂಗ್' ಎಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಉತ್ತರಗಳನ್ನು ಕೇಳಿ ಅಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.

ಇನ್ನು ಪ್ರೇಕ್ಷಕರಿಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, "ಇದು ತಪ್ಪು ಉತ್ತರ ಸಹೋದರ, ನಾನು ನಿಮಗೆ ಸರಿಯಾದ ಉತ್ತರವನ್ನು ಇಲ್ಲಿ ಹೇಳುವುದಿಲ್ಲ" ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link