Anchor Anushree: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ.. ಆಂಕರ್‌ ಅನುಶ್ರೀ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Mon, 15 Apr 2024-12:51 pm,

ಜೀ ಕನ್ನಡದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಇವರ ಆಂಕರಿಂಗ್ ಇರಲೇಬೇಕು ಎನ್ನುವ ಮಟ್ಟಿಗೆ ಜನಮನ ತಲುಪಿದ್ದಾರೆ ಅನುಶ್ರೀ.. ಇದರೊಂದಿಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಸೆಲೆಬ್ರಿಟಿಗಳ ಇಂಟರ್‌ವ್ಯೂವ್‌ ಕೂಡ ಮಾಡುತ್ತಾರೆ..   

ಅತೀ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡ ಮಂಗಳೂರು ಚೆಲುವೆ ಅನುಶ್ರೀ ಒಂದು ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದನ್ನು ತಿಳಿಯುವುದು ಹಲವರ ಕುತೂಹಲ.. ಈ ಬಗೆಗಿನ ಸಣ್ಣ ಮಾಹಿತಿಯೊಂದು ಇಲ್ಲಿದೆ..   

ಕನ್ನಡ ಸಿನಿರಂಗ ಹಾಗೂ ಕಿರುತೆರೆಯ ಯಾವುದೇ ಪ್ರೋಗ್ರಾಮ್‌ಗಳಾದರೂ ಅನುಶ್ರೀ ಅವರ ಆಂಕರಿಂಗ್‌ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣವೆನ್ನಿಸುತ್ತದೆ ಎನ್ನುವುಷ್ಟು ಕ್ರೇಜ್‌ ಗಿಟ್ಟಿಸಿಕೊಂಡಿರುವ ಅನುಶ್ರೀ ಅವರಿಗೆ ನಟ-ನಟಿಯರಷ್ಟೇ ಅಭಿಮಾನಿ ಬಳಗವಿದೆ..  

ಕಾರ್ಯಕ್ರಮು ಮುಗಿಯುವವರೆಗೂ ಬೇಸರವಾಗದೇ ಅದೇ ಎನರ್ಜಿಯಿಂದ ಎಲ್ಲರನ್ನು ರಂಜಿಸುವ ಚೆಲುವೆ ಅನುಶ್ರೀ ತಮ್ಮ ಆರಂಭಿದ ದಿನಗಳಲ್ಲಿ 250ರೂಗೆ ಕೆಲಸಮಾಡಿದ್ದಾರೆ.. ಇದೀಗ ನಟಿ, ನಿರೂಪಕಿ ಒಂದು ಎಪಿಸೋಡ್‌ಗೆ ಒಂದು ಲಕ್ಷ ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು.. ವರದಿಯ ಪ್ರಕಾರ ಅವರ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದ್ದು ಅದರಂತೆ ತಮ್ಮ ಸಂಭಾವನೆಯನ್ನು ಅವರು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ..   

ನಟ-ನಟಿಯರಷ್ಟೇ ಕ್ರೇಜ್‌ ಗಳಿಸಿಕೊಂಡ ಕನ್ನಡ ಚೆಲುವೆ ಅನುಶ್ರೀ ತಮ್ಮ ಆರಂಂಭಿಕ ದಿನಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡು ಸದ್ಯ ಖ್ಯಾತ ನಿರೂಪಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.. ಅಲ್ಲದೇ ಯಾರಿಗಾದರೂ ಕನ್ನಡ ಫೇವರೆಟ್‌ ಆಂಕರ್‌ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ಅನುಶ್ರೀ ಅವರ ಹೆಸರು...   

ZEENEWS TRENDING STORIES

By continuing to use the site, you agree to the use of cookies. You can find out more by Tapping this link