ಬಿಗ್ ಬಾಸ್ 11 ನಿರೂಪಣೆಗೆ ಕಿಚ್ಚ ಸುದೀಪ್ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?
ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಸೆಪ್ಟೆಂಬರ್ 29 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ.
ನಿನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿ ಪ್ರೊಮೋ ರಿಲೀಸ್ ಮಾಡಿದೆ. ಇದರಲ್ಲಿ ಈ ಬಾರಿಯ ಹೋಸ್ಟ್ ಕಿಚ್ಚ ಸುದೀಪ್ ಎಂಬುದನ್ನು ವಾಹಿನಿ ಅಧಿಕೃತವಾಗಿ ಬಹಿರಂಗಪಡಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಹೋಸ್ಟ್ ಸುದೀಪ್ ಎಂಬ ಮಾಹಿತಿ ರಿವೀಲ್ ಆದ ಬೆನ್ನಲ್ಲೇ ಸಂಭಾವನೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸುದೀಪ್ ಬಿಲ್ಲ ರಂಗ ಭಾಷಾ ಚಿತ್ರದ ನಡುವೆ ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ. ಬಿಗ್ ಬಾಸ್ ನಿರೂಪಕರಾಗಿ 2015 ರಲ್ಲಿ ಕಲರ್ಸ್ ಕನ್ನಡ ವಾಹಿನಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು.
ಮೊದಲು ಇದು 5 ವರ್ಷಗಳ ಒಪ್ಪಂದವಾಗಿತ್ತು, ಆ ಸಂದರ್ಭದಲ್ಲಿ 20 ಕೋಟಿ ರೂಪಾಯಿ ಸಂಭಾವೆನೆ ಪಡೆದಿದ್ದರು ಎನ್ನಲಾಗಿದೆ.
ಈ ಸಂಭಾವನೆ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. ಸುದೀಪ್ ಸದ್ಯ ಒಂದು ಸೀಸನ್‌ಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.
ಸೂಚನೆ: ಇದು ಕೇವಲ ಊಹಾಪೋಹವಾಗಿದ್ದು, ವಾಹಿನಿ ಆಗಲಿ ಸುದೀಪ್ ಆಗಲಿ ಈ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.