ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ..?
ಹಾಗಲಕಾಯಿ ರಸವು ಚರ್ಮದ ಮೇಲೆ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ತುಂಬಾ ಪ್ರಯೋಜನಕಾರಿಯಾಗಿದೆ.
ಸಂಧಿವಾತದಲ್ಲಿ ಉಂಟಾಗುವ ನೋವಿಗೆ ಮುಖ್ಯ ಕಾರಣವೆಂದರೆ ರಕ್ತದಲ್ಲಿ ಕಲ್ಮಶಗಳಿರುವುದು ಆದ್ದರಿಂದ ಹಾಗಲಕಾಯಿಯು ರಕ್ತದ ಕಲ್ಮಶಗಳನ್ನು ತೆಗೆದುಹಾಕುತ್ತದೆ.
ಹಾಗಲಕಾಯಿಯ ರಸವನ್ನು ಕುಡಿಯುವ ಮೂಲಕ ಅತಿಯಾದ ಮದ್ಯ ಸೇವನೆಯ ಅಮಲು ಹೋಗಲಾಡಿಸುತ್ತದೆ, ಜೊತೆಗೆ ಯಕೃತ್ತನ್ನು ಶುದ್ಧಗೊಳಿಸುತ್ತದೆ.
ಎರಡು ಚಮಚ ಹಾಗಲಕಾಯಿ ರಸವನ್ನು ಸಮಾನ ಪ್ರಮಾಣದ ಬಿಳಿ ಈರುಳ್ಳಿ ರಸದೊಂದಿಗೆ ಪ್ರತಿದಿನ ಸೇವಿಸುವುದರಿಂದ ಕಾಲರಾ ಸುಧಾರಿಸುತ್ತದೆ.
ಹಾಗಲಕಾಯಿ ರಸವು ಮಧುಮೇಹವಿರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸವನ್ನು ಅರ್ಧ ಕಪ್ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ.