ಸನಾ ಗಂಗೂಲಿ-ಸಾರಾ ತೆಂಡೂಲ್ಕರ್ ವಿದ್ಯಾಭ್ಯಾಸ ಪಡೆದ ಈ ಪ್ರತಿಷ್ಠಿತ ಕಾಲೇಜಿನ ಫೀಜ್ ಎಷ್ಟು ಗೊತ್ತಾ?

Sun, 26 May 2024-3:38 pm,

ಅಧಿಕೃತ ವರದಿಗಳ ಪ್ರಕಾರ ಕಳೆದ ವರ್ಷ ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಲೆಂದು ವಿದೇಶಕ್ಕೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಹೀಗೆ ಅನೇಕ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಬ್ರಿಟನ್ ಮತ್ತು ಅಮೆರಿಕದ ಉನ್ನತ ಸಂಸ್ಥೆಗಳು ಉನ್ನತ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ಒದಗಿಸುತ್ತದೆ.

ಇಂತಹದ್ದೇ ಮತ್ತೊಂದು ಪ್ರಖ್ಯಾತ ವಿಶ್ವವಿದ್ಯಾಲಯ ಲಂಡನ್’ನಲ್ಲಿದ್ದು, ಇದು ಭಾರತದ ಸ್ಟಾರ್ ಮಕ್ಕಳ ನೆಚ್ಚಿನ ಶಿಕ್ಷಣ ಸಂಸ್ಥೆ ಎಂದೇ ಹೇಳಬಹುದು. ದೇಶದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ಇದೇ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಅಂದಹಾಗೆ ಈ ವಿಶ್ವವಿದ್ಯಾನಿಲಯವು ವಿಶ್ವದ ಉನ್ನತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಅಷ್ಟೇ ಅಲ್ಲದೆ, ಇಲ್ಲಿನ ಫೀಸ್ ಎಷ್ಟಿದೆ ಎಂದರೆ ಸಾಮಾನ್ಯ ಜನರು ಊಹೆ ಮಾಡುವುದು ಕೂಡ ಕಷ್ಟವೇ.. ಅಷ್ಟರ ಮಟ್ಟಿಗೆ ಹೈಲೆವೆಲ್’ನಲ್ಲಿದೆ.

ಈ ವಿಶ್ವವಿದ್ಯಾಲಯದ ಹೆಸರು ಯೂನಿವರ್ಸಿಟಿ ಕಾಲೇಜ್ ಲಂಡನ್ (UCL). ಇದು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು. QS ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಶ್ರೇಯಾಂಕವನ್ನು ಪಡೆದುಕೊಂಡಿರುವ ಈ ವಿದ್ಯಾಸಂಸ್ಥೆ ಬ್ರಿಟನ್‌’ನಲ್ಲಿ ಎರಡನೇ ಅತ್ಯಂತ ಗೌರವಾನ್ವಿತ ವಿಶ್ವವಿದ್ಯಾಲಯವಾಗಿದೆ. ಗಮನಿಸಬೇಕಾದ ಅಂಶವೆಂದರೆ QS ವಿಶ್ವ ಶ್ರೇಯಾಂಕದಲ್ಲಿ ಭಾರತದ ಯಾವುದೇ ಸಂಸ್ಥೆಯು ಟಾಪ್ 150 ರಲ್ಲಿ ಬಂದಿಲ್ಲ

ಅಂದಹಾಗೆ ಯೂನಿವರ್ಸಿಟಿ ಕಾಲೇಜ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಓದಿರುವ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು 30 ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಇಲ್ಲಿ ಅರ್ಥಶಾಸ್ತ್ರದಲ್ಲಿ ಡಿಗ್ರಿ ಪಡೆದಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಈ ವಿಶ್ವವಿದ್ಯಾಲಯದಿಂದ Clinical and Public Health Nutrition ವಿಷಯದಲ್ಲಿ ಎಂಎಸ್ಸಿ ಪದವಿಯನ್ನು ಪಡೆದಿದ್ದಾರೆ. ಇತ್ತೀಚೆಗೆಯಷ್ಟೇ ಅವರ ಕೋರ್ಸ್ ಪೂರ್ಣಗೊಂಡಿದೆ.

ಯೂನಿವರ್ಸಿಟಿ ಕಾಲೇಜ್ ಲಂಡನ್ ಫೀಜ್ ಬಗ್ಗೆ ತಿಳಿಯುವುದಾದರೆ, ಇದು ವಿಶ್ವದ ಅತ್ಯಂತ ದುಬಾರಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಈ ಸಂಸ್ಥೆಯಿಂದ ಮೂರರಿಂದ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ ಮಾಡಿದರೆ, ನೀವು ಪ್ರತಿ ವರ್ಷ 30 ರಿಂದ 35 ಲಕ್ಷ ರೂ.ಗಳನ್ನು ಬೋಧನಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಅಂದರೆ ನಾಲ್ಕು ವರ್ಷಗಳ ಕೋರ್ಸ್‌’ಗೆ ಸುಮಾರು 1.40 ಕೋಟಿ ರೂಪಾಯಿ ಪಾವತಿಸಬೇಕಾಗಬಹುದು. ಇದರ ಹೊರತಾಗಿ ವಸತಿ ಮತ್ತು ಆಹಾರದ ವೆಚ್ಚಗಳಿವೆ.

ಮಾಸ್ಟರ್ ಆಫ್ ಸೈನ್ಸ್ (MS) ಪದವಿಗಾಗಿ, ನೀವು ಒಂದು ವರ್ಷದಲ್ಲಿ 40 ಲಕ್ಷದವರೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link