ಚಳಿಗಾಲದಲ್ಲಿ ವಾರಕ್ಕೆ 2 ಬಾರಿ ಪೇರಲೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಂದ ಸಿಗುತ್ತೆ ಪರ್ಮನೆಂಟ್ ರಿಲೀಫ್

Wed, 03 Jan 2024-7:18 pm,

ಪೇರಲ ಜ್ಯೂಸ್’ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿದೆ. ಪೇರಲ ಹಣ್ಣು ಅಥವಾ ಜ್ಯೂಸ್ ಆಗಿರಲಿ, ಎರಡನ್ನೂ ಜೀರ್ಣಾಂಗ ವ್ಯವಸ್ಥೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.

ಪೇರಲ ರಸದಲ್ಲಿ ಇರುವ ಪೋಷಕಾಂಶಗಳ ಬಗ್ಗೆ ಮಾತನಾಡುವುದಾದರೆ, ಇದು ಶಕ್ತಿ, ವಿಟಮಿನ್ ಎ, ಸಿ, ಇ, ಲೈಕೋಪೀನ್, ಆಂಟಿ ಆಕ್ಸಿಡೆಂಟ್‌’ಗಳು, ಮ್ಯಾಂಗನೀಸ್, ಫೋಲೇಟ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌’ಗಳು, ರಂಜಕ, ಮೆಗ್ನೀಸಿಯಮ್, ಫೈಟೊಕೆಮಿಕಲ್‌’ಗಳು, ಫೈಬರ್, ಕಬ್ಬಿಣ ಇತ್ಯಾದಿಗಳನ್ನು ಒಳಗೊಂಡಿದೆ.

TOI ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಪೇರಲ ಜ್ಯೂಸ್ ನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಹೀಗಾಗಿ ಈ ಜ್ಯೂಸ್ ನ್ನು ಕುಡಿದರೆ ತೂಕ ಹೆಚ್ಚಾಗುವ ಟೆನ್ಶನ್ ಇರುವುದಿಲ್ಲ. ಚಯಾಪಚಯವನ್ನು ಸಹ ಹೆಚ್ಚಿಸುತ್ತದೆ.

ಪೇರಲ ಜ್ಯೂಸ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವಿಟಮಿನ್ ಸಿ ದೈನಂದಿನ ಸೇವನೆಯು ಬಹಳ ಮುಖ್ಯ.

ವಿಟಮಿನ್ ಸಿ, ಇ ಮತ್ತು ಖನಿಜಗಳಂತಹ ಅನೇಕ ವಿಧದ ವಿಟಮಿನ್‌’ಗಳಿಂದ ಸಮೃದ್ಧವಾಗಿರುವ ಇದು ಚರ್ಮಕ್ಕೆ ಉತ್ತಮ ಪಾನೀಯವಾಗಿದೆ. ಜೀವಸತ್ವಗಳು ಮತ್ತು ಖನಿಜಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ.

ಪೇರಲವು ಡಯೆಟರಿ ಫೈಬರ್ ಅನ್ನು ಹೊಂದಿರುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೇರಲ ತಿಂದರೂ ಅಥವಾ ಅದರ ಜ್ಯೂಸ್ ಕುಡಿದರೂ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಪೇರಲ ರಸದಲ್ಲಿ ವಿಟಮಿನ್ ಎ ಕೂಡ ಉತ್ತಮ ಪ್ರಮಾಣದಲ್ಲಿದೆ. ದೃಷ್ಟಿ ಮತ್ತು ಆರೋಗ್ಯವನ್ನು ಸುಧಾರಿಸಲು ವಿಟಮಿನ್ ಎ ಬಹಳ ಮುಖ್ಯ. ಇದರ ಸೇವನೆಯಿಂದ ಕಣ್ಣಿನ ಸೋಂಕು, ಕಣ್ಣಿನ ಪೊರೆ ಇತ್ಯಾದಿಗಳ ಅಪಾಯವೂ ಕಡಿಮೆಯಾಗುತ್ತದೆ.

ಮಧುಮೇಹ ರೋಗಿಳು ಪೇರಲವನ್ನು ತಿನ್ನುವುದು ಉತ್ತಮ. ಜ್ಯೂಸ್ ಕೂಡ ಕುಡಿಯಬಹುದು, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪೇರಲವು ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link