ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಬಳಕೆ ಮಾಡುವ ಕ್ರಿಕೆಟ್ ಹೆಲ್ಮೆಟ್ ಬೆಲೆಯೆಷ್ಟು ಗೊತ್ತಾ?
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಭಾರತ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲಿದೆ. ಈ ವರದಿಯಲ್ಲಿ ನಾವಿಂದು ವೃತ್ತಿಪರ ಕ್ರಿಕೆಟಿಗರು ಬಳಸುವ ಹೆಲ್ಮೆಟ್ ಬೆಲೆ ಎಷ್ಟು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದೇವೆ.
ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರ ಕ್ರಿಕೆಟಿಗರು ಬಳಕೆ ಮಾಡುವ ಹೆಲ್ಮೆಟ್’ಗಳ ಬೆಲೆ 2,000 ರೂ.ನಿಂದ 20,000 ರೂ.ವರೆಗೆ ಇರುತ್ತದೆ. ಅಥವಾ ಅದಕ್ಕಿಂತಲೂ ಹೆಚ್ಚಿನ ದರ ಇರಬಹುದು.
ಇನ್ನು ಈ ಎಲ್ಲಾ ಹೆಲ್ಮೆಟ್’ಗಳ ಗುಣಮಟ್ಟ ಮತ್ತು ಬ್ರಾಂಡ್ ಮುಖ್ಯವಾಗಿರುತ್ತದೆ. ಲೆದರ್ ಬಾಲ್ ಬಡಿದರೆ ಗಾಯವಾಗುವ ಸಾಧ್ಯತೆಯಿರುವುದರಿಂದ ಇಂತಹ ಗುಣಮಟ್ಟದ ಹೆಲ್ಮೆಟ್ ಒಳಗೊಂಡ ಕಿಟ್’ಗಳನ್ನು ಬಳಕೆ ಮಾಡಲಾಗುತ್ತದೆ.
ವೃತ್ತಿಪರ ಕ್ರಿಕೆಟಿಗರಿಗೆ ಒದಗಿಸಲಾಗುವ ಒಂದು ಜೋಡಿ ಕೈಗವಸುಗಳ ಬೆಲೆ ಸುಮಾರು 2,000 ರೂ.ನಿಂದ 10,000 ರೂ.ವರೆಗೆ ಇರುತ್ತದೆ.
ಇನ್ನು ಕ್ರಿಕೆಟ್ ಕಿಟ್ ಬಗ್ಗೆ ಐಸಿಸಿ ಕೆಲವು ನಿಮಯಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಅನುಸಾರ ಯಾವುದೇ ಹೆಲ್ಮೆಟ್ ಅನ್ನು ಸಹ ಬ್ರಿಟಿಷ್ ಸ್ಟ್ಯಾಂಡರ್ಡ್ BS7928:2013ಕ್ಕೆ ತಕ್ಕಂತೆ ತಯಾರಿಸಬೇಕು.
2017ರ ಫೆಬ್ರವರಿ 1ರಿಂದ ಈ ನಿಯಮವನ್ನು ಜಾರಿಗೆ ತಂದಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಉತ್ತಮ ಬೆಲೆಯ ಕ್ರಿಕೆಟ್ ಕಿಟ್’ಗಳನ್ನೇ ಬಳಕೆ ಮಾಡುತ್ತಾರೆ.