ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ `ದರ್ಶನ್` ಧರಿಸಿದ್ದ ಬ್ರಾಂಡೆಡ್ ಟೀಶರ್ಟ್, ಕೂಲಿಂಗ್ ಗ್ಲಾಸ್, ಜೀನ್ಸ್ ಬೆಲೆ ಎಷ್ಟು ಗೊತ್ತಾ?

Fri, 30 Aug 2024-12:26 pm,

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಸದ್ಯ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ  ಸಂಬಂಧ ದರ್ಶನ್ ಅಂಡ್ ಗ್ಯಾಂಗ್ ಅನ್ನು ರಾಜ್ಯದ ಬೇರೆ ಬೇರೆ ಜೈಲಿಗಳಿಗೆ ಇಂದು ಶಿಫ್ಟ್ ಮಾಡಲಾಗಿದ್ದು, ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ.   

ಬಳ್ಳಾರಿ ಸೆಂಟ್ರಲ್‌ ಜೈಲಿಗೆ 'ದಾಸ'ನ ಎಂಟ್ರಿ ಆಗಿದ್ದು, ಜೈಲಿನ 15ನೇ ಸೆಲ್‌ನಲ್ಲಿ ದರ್ಶನ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.  

ಇನ್ನೂ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಾಗ ಪೊಲೀಸ್ ವ್ಯಾನಿನಿಂದ ಇಳಿದು ಜೈಲಿಗೆ ಎಂಟ್ರಿಯಾದಾಗಾ ದರ್ಶನ್  ತೊಟ್ಟಿದ್ದ ಉಡುಪಿನ ಬೆಲೆ ಬಗ್ಗೆ ಸದ್ಯ ಚರ್ಚೆ ಆರಂಭವಾಗಿದೆ. 

ಪೊಲೀಸ್ ವ್ಯಾನಿನಿಂದ ಇಳಿದು ಜೈಲಿಗೆ ಎಂಟ್ರಿಯಾದ ದರ್ಶನ್ ಅವರನ್ನು ಗಮನಿಸಿದಾಗ, ಅವರು ಬ್ರಾಂಡೆಡ್ ಟೀಶರ್ಟ್, ಪ್ಯಾಂಟ್ ಧರಿಸಿದ್ದರು. ಅವರ ಟೀಶರ್ಟ್ ನಲ್ಲಿ ಗಾಗಲ್ ಕೂಡ ಇತ್ತು. 

ದರ್ಶನ್ ಈ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯೂಮಾ ಟೀಶರ್ಟ್ ಧರಿಸಿದ್ದರು. ಇದರ ಬೆಲೆ ಅಂದಾಜು 10 ಸಾವಿರ ರೂಪಾಯಿ ಅಂತ ಹೇಳಲಾಗುತ್ತಿದೆ. 

ಇನ್ನೂ ಈ ಸಂದರ್ಭದಲ್ಲಿ ದರ್ಶನ್ ಟೀಶರ್ಟ್ ನಲ್ಲಿ ನೇತು ಹಾಕಿದ್ದ  ಕೂಲಿಂಗ್ ಗ್ಲಾಸ್ ನ ಬೆಲೆ ಏನಿಲ್ಲವೆಂದರೂ 1 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. 

ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಬಳಿಯಿದ್ದ ಫುಲ್ ಓವರ್ ಸುಮಾರು  25 ಸಾವಿರ ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತಿದೆ. 

ಬಳ್ಳಾರಿ ಜೈಲು ಪ್ರವೇಶಿಸುವಾದ 'ದಾಸ' ಧರಿಸಿದ್ದ ಬ್ರಾಂಡೆಡ್ ಜೀನ್ಸ್ ಏನಿಲ್ಲವೆಂದರೂ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ದರ್ಶನ್ ಬಳ್ಳಾರಿ ಜೈಲು ಪ್ರವೇಶಿಸುವಾಗ ತಮ್ಮ ಎಡಗೈಗೆ ತೊಟ್ಟಿದ್ದ ವ್ರಾಪ್ ಬ್ಯಾಂಡ್ ನ ಬೆಲೆ ಕನಿಷ್ಟವೆಂದರೂ 5 ಸಾವಿರ ರೂ.ಗಳದ್ದೆಂದು ಹೇಳಲಾಗಿದೆ. 

ಇನ್ನೂ ದರ್ಶನ್ ಉಡುಪಿನ ಬಗ್ಗೆ ಅಷ್ಟೇ ಅಲ್ಲದೆ ಅವರ ಟೀಶರ್ಟ್ ನಲ್ಲಿದ್ದ ನ್ಯಾಯ (Justice), ಘನತೆ (Digniti), ಸಮಾನತೆ (Equality) ಮತ್ತು ಶಾಂತಿ (Peace) ಸಂದೇಶ ಯಾರಿಗೆ. .? ಎಂಬ ಬಗ್ಗೆಯೂ ಸದ್ಯ ಭಾರೀ ಚರ್ಚೆ ಆರಂಭವಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link