Wedding Saree: ಮದುವೆಯಲ್ಲಿ ವಧು ಹೆಚ್ಚಾಗಿ ಕೆಂಪು ಬಣ್ಣದ ಸೀರೆ ಉಡಲು ಕಾರಣವೇನು ಗೊತ್ತಾ?
ಭಾರತದ ಮೂಲೆ ಮೂಲೆಯಲ್ಲೂ ವಿಭಿನ್ನವಾದ ಸಂಸ್ಕೃತಿ ಸಂಪ್ರದಾಯವಿದೆ. ವಿವಾಹ ವಿಚಾರದಲ್ಲೂ ಇನ್ನೂ ವಿಭಿನ್ನತೆಯಿದೆ. ಸಮುದಾಯ, ರಾಜ್ಯ ಬೇರೆ ಬೇರೆಯಾದರೂ ವಧು ತೊಡುವ ಬಟ್ಟೆಯ ಬಣ್ಣ ಹೆಚ್ಚಾಗಿ ಕೆಂಪು ರಂಗಿನದ್ದಾಗಿರುತ್ತದೆ.
ಸೀರೆಯಿಂದ ಹಿಡಿದು, ಲೆಹೆಂಗಾದವರೆಗೂ ಕೆಂಪು ಬಣ್ಣದ ಬಟ್ಟೆಯಲ್ಲಿಯೇ ವಧುವನ್ನು ಹೆಚ್ಚಾಗಿ ನೋಡುತ್ತೇವೆ. ಮದುವೆಯ ಬಟ್ಟೆಯ ಬಣ್ಣ ಕೆಂಪಾಗಿರಲು ಬಲವಾದ ಕಾರಣವೂ ಇದೆ.
ಕೆಂಪು ಬಣ್ಣ ದುರ್ಗೆಗೆ ಬಲು ಪ್ರಿಯವಾದದು, ಕುಂಕುಮದಂತೆ ಕೆಂಪು ಬಣ್ಣವೂ ಪವಿತ್ರ ಎಂಬ ಮಾತಿದೆ. ಹೀಗಾಗಿ ಶುಭಕಾರ್ಯದ ಪ್ರಾರಂಭದಲ್ಲಿ ಕೆಂಪು ಬಣ್ಣದ ಸೀರೆಯನ್ನು ವಧುವಿಗೆ ತೊಡಿಸಲಾಗುತ್ತದೆ.
ಕೆಂಪು ಬಣ್ಣಕ್ಕೆ ಹಲವಾರು ಅರ್ಥಗಳಿವೆ. ಕೆಂಪು ಎಂಬುದು ನೂತನ ಆರಂಭವನ್ನು ಒಂದೆಡೆ ಪ್ರತಿಬಿಂಬಿಸಿದರೆ, ಮತ್ತೊಂದೆಡೆ ಸಂಪತ್ತನ್ನೂ ಸಹ ಪ್ರತಿನಿಧಿಸುತ್ತದೆ.
ಇನ್ನು ಕೆಂಪು ಬಣ್ಣವು ಧೈರ್ಯ ಮತ್ತು ಮಾನಸಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಮದುವೆಯಾದ ಬಳಿಕ ವಧು ತನ್ನ ಗಂಡನ ಮನೆಯಲ್ಲಿ ಧೈರ್ಯಶಾಲಿಯಾಗಿ, ಎಲ್ಲವನ್ನೂ ಶಾಂತ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವಂತೆ ಆಗಲಿ ಎಂಬ ಹಾರೈಕೆಯಿಂದ ಕೆಂಪು ಬಣ್ಣದ ಬಟ್ಟೆಯನ್ನು ತೊಡಿಸಲಾಗುತ್ತದೆ.