Lionel Messi Properties: ಈ ದೇಶಗಳಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟ ಮೆಸ್ಸಿ: ಅರ್ಜೆಂಟಿನಾ ದಿಗ್ಗಜನ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ?

Sat, 17 Dec 2022-2:05 pm,

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫಿಫಾ ವಿಶ್ವಕಪ್-2022 ರ ಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾವನ್ನು 3-0 ಅಂತರದಿಂದ ಸೋಲಿಸಿದ್ದರು. ಈಗ ಅವರು ಫ್ರಾನ್ಸ್‌ನ ಸವಾಲನ್ನು ಎದುರಿಸಲಿದ್ದಾರೆ.

ಇದು ಮೆಸ್ಸಿಯ ಕೊನೆಯ ಫಿಫಾ ವಿಶ್ವಕಪ್ ಆಗಿರಬಹುದು ಎಂಬ ವರದಿಗಳು ಹೇಳುತ್ತಿವೆ. ಮೆಸ್ಸಿಯನ್ನು ಕೋಟ್ಯಾಂತರ ಅಭಿಮಾನಿಗಳು ಫಾಲೋ ಮಾಡುವವರಿದ್ದಾರೆ. ಭಾರತದಲ್ಲಿಯೂ ಮೆಸ್ಸಿಯ ಅಭಿಮಾನಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ.

ಇನ್ನು ಮೆಸ್ಸಿ ಪ್ರಪಂಚದಾದ್ಯಂತ ಅನೇಕ ಮನೆಗಳು ಮತ್ತು ಆಸ್ತಿಗಳನ್ನು ಹೊಂದಿದ್ದಾರೆ. ಮೆಸ್ಸಿಯ ಐಷಾರಾಮಿ ಮನೆಗಳ ಒಟ್ಟು ವೆಚ್ಚ ಸುಮಾರು 234 ಕೋಟಿಗಳು. ಅವರ ನಿವ್ವಳ ಮೌಲ್ಯ ಸುಮಾರು 3268 ರೂ ಕೋಟಿ.

ಮೆಸ್ಸಿಯ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮನೆ ಸ್ಪೇನ್ ಬಳಿಯ ಐಬಿಜಾ ದ್ವೀಪದಲ್ಲಿದೆ. ಇದರ ಬೆಲೆ ಸುಮಾರು 100 ಕೋಟಿ ರೂ.

ಸುಮಾರು 56 ಕೋಟಿ ರೂಪಾಯಿ ಮೌಲ್ಯದ ಮೆಸ್ಸಿ ಅವರ ಬಂಗಲೆ ಕೂಡ ಬಾರ್ಸಿಲೋನಾದಲ್ಲಿದೆ. ಅಲ್ಲಿಯೇ ಮೆಸ್ಸಿ ವಾಸ ಮಾಡುತ್ತಾರೆ..

ಮೆಸ್ಸಿಯ ಪತ್ನಿ ಮತ್ತು ಮೂವರೂ ಮಕ್ಕಳು ಕೂಡ ಹೆಚ್ಚಿನ ಸಮಯವನ್ನು ಇದೇ ಬಂಗಲೆಯಲ್ಲಿ ಕಳೆಯುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link