Lydia Thomas talks with ghosts: ದೆವ್ವಗಳ ಜೊತೆಯೇ ಜೀವನ ಸಾಗಿಸುತ್ತಿರುವ ಈಕೆಗೆ ಬಾಯ್ ಫ್ರೆಂಡ್ ನ ಸತ್ತ ಅಜ್ಜಿ ಮಾಡಿದ್ದೇನು ಗೊತ್ತಾ?

Fri, 09 Dec 2022-9:44 am,

ಬ್ರಿಟಿಷ್ ಸುದ್ದಿ ವೆಬ್‌ಸೈಟ್ 'ದಿ ಮಿರರ್' ವರದಿಯ ಪ್ರಕಾರ, ಲಿಡಿಯಾ ಥಾಮಸ್ ತನ್ನ 8 ನೇ ವಯಸ್ಸಿನಲ್ಲಿ ತನ್ನ ಅಜ್ಜಿಯ ಆತ್ಮವನ್ನು ಮೊದಲ ಬಾರಿಗೆ ನೋಡಿದ್ದಾಳೆ. ಆಕೆಗೆ 10 ವರ್ಷ ತುಂಬಿದಾಗ ಈ ವಿಷಯವನ್ನು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಬಳಿಕ ಲಿಡಿಯಾ ತನ್ನ ಹದಿಹರೆಯದ ವಯಸ್ಸಿನಲ್ಲಿ ಆತ್ಮಗಳನ್ನು ನಿಯಂತ್ರಿಸಲು ಕಲಿಯುವವರೆಗೂ ಅಜ್ಜಿಯ ಆತ್ಮ ಕಂಡು ಹೆದರುತ್ತಿದ್ದಳಂತೆ.

ಲಿಡಿಯಾ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಹೊಸ ಅಪ್ಡೇಟ್ ನೀಡುತ್ತಲೇ ಇರುತ್ತಾಳೆ. ಇಂಟರ್ನೆಟ್ ಲೋಕದಲ್ಲಿ ದೆವ್ವ, ಮಾಟ-ಮಂತ್ರಗಳನ್ನು ನಂಬುವವರದ್ದೇ ಬೇರೆ ಪ್ರಪಂಚ. ಹೀಗಿರುವಾಗ ಈಕೆ ನೀಡುವ ಮಾಹಿತಿ ಅನೇಕರಿಗೆ ಇಷ್ಟವಾಗಿದೆ.

ಈಗ ಆತ್ಮಗಳೊಂದಿಗೆ ಮಾತನಾಡಲು ಅಭ್ಯಾಸವಾಗಿದೆ ಎಂದು ಲಿಡಿಯಾ ಹೇಳುತ್ತಾಳೆ. ಬಾಯ್ ಫ್ರೆಂಡ್ ಜೊತೆಗಿರುವಾಗಲೂ ಅವನ ಸತ್ತ ಅಜ್ಜಿಯ ದೆವ್ವ ಅವಳ ಸುತ್ತ ಕುಣಿಯುವಂತೆ ಕಾಣುತ್ತದೆ. ಅವರು ಫೆಬ್ರವರಿ 2019 ರಲ್ಲಿ ನಿಧನರಾಗಿದ್ದಾರೆ.

ತನ್ನ ಸಂದರ್ಶನವೊಂದರಲ್ಲಿ ಲಿಡಿಯಾ ಮಾತನಾಡಿದ್ದು, ತನ್ನ ಬಾಲ್ಯದ ಕೆಲವು ವರ್ಷಗಳಲ್ಲಿ ದೆವ್ವಗಳೊಂದಿಗೆ ವಾಸಿಸುವ ಮತ್ತು ಮಾತನಾಡುವ ವ್ಯಸನಿಯಾಗಿದ್ದಳಂತೆ. ಇದಾದ ನಂತರ ಆಗಾಗ ಬರುತ್ತಿದ್ದ ಆತ್ಮಗಳಿಗೆ ಅವರವರ ಇಚ್ಛೆಯಂತೆ ಹೋಗುವಂತೆ ಹೇಳುತ್ತಿದ್ದಳಂತೆ.

ಲಿಡಿಯಾ ಕೆನಡಾದ ವ್ಯಾಂಕೋವರ್‌ನಲ್ಲಿ ತನ್ನ ಗೆಳೆಯ ಸಾಫ್ಟ್‌ವೇರ್ ಇಂಜಿನಿಯರ್ ಡೇನಿಯಲ್‌ನೊಂದಿಗೆ ವಾಸಿಸುತ್ತಾಳೆ. ಲಿಡಿಯಾ ಅವರು ಡಿಸ್ಪ್ಯೂಟ್ ರೆಸೊಲ್ಯೂಶನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆತ್ಮಗಳೊಂದಿಗೆ ಮಾತನಾಡುವುದು ನನ್ನ ವೃತ್ತಿಯಲ್ಲ. ಈ ದೈವಿಕ ಶಕ್ತಿಯ ಬಗ್ಗೆ ಅನೇಕರಿಗೆ ತಿಳಿದಿದೆ. ಅದಕ್ಕಾಗಿಯೇ ಅನೇಕ ಮಾಂತ್ರಿಕರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ, ಆದರೆ ಅವರ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link