ಸ್ಯಾಂಡಲ್‌ವುಡ್ ಟಾಪ್ ನಟರಾದ ದರ್ಶನ್, ಸುದೀಪ್ ಓದಿದ್ದೆಷ್ಟು? ಇಬ್ಬರಲ್ಲಿ ಯಾರು ಹೆಚ್ಚು ಶಿಕ್ಷಣ ಪಡೆದಿದ್ದಾರೆ ಗೊತ್ತೇ?
ಮೆಜೆಸ್ಟಿಕ್, ಸ್ಪರ್ಶದಂತಹ ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ನಟರಾಗಿದ್ದಾರೆ..
ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈ ಇಬ್ಬರೂ ನಟರು ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರಂತೆ ಕುಚಿಕುಗಳಾಗಿದ್ದರು..
ಆದರೆ ದಚ್ಚು ಕಿಚ್ಚು ಕೆಲವು ಮನಸ್ಥಾಪಗಳಿಂದ ದೂರವಾದವರು ಇಂದಿಗೂ ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಲ್ಲ.. ಇದು ಎಷ್ಟೋ ಕನ್ನಡಾಭಿಮಾನಿಗಳಿಗೆ ಬೇಸರ ತಂದಿದೆ ಎಂದರೇ ತಪ್ಪಾಗುವುದಿಲ್ಲ..
ನಟ ದರ್ಶನ್ ಕ್ರಾಂತಿ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಮಾತನಾಡುವಾಗ "ನಾನು ಓದಿದ್ದು 10ನೇ ತರಗತಿ" ಎಂದು ತಮ್ಮ ವಿದ್ಯಾಭ್ಯಾಸ ಎಷ್ಟು ಎನ್ನುವುದನ್ನು ಹೇಳಿಕೊಂಡಿದ್ದರು.
ಇನ್ನು ಮೂಲತಃ ಶಿವಮೊಗ್ಗದವರಾದ ಸುದೀಪ್ ಶಿಕ್ಷಣಕ್ಕಾಗಿ ಬೆಂಗಳುರಿಗೆ ಬಂದು ಇಂಜಿನಿಯರಿಂಗ್ ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ವಿಷಯಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ಸದ್ಯ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ..
ಈ ರೇಣುಕಾಸ್ವಾಮಿ ಹ* ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸದ್ಯಕ್ಕೆ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಬಿಡುಗಡೆ ಭಾಗ್ಯ ಇಲ್ಲ ಎನ್ನಲಾಗುತ್ತಿದೆ..