ಸಿನಿರಂಗಕ್ಕೆ ವಿಜಯ್ ರಾಘವೇಂದ್ರ ಪುತ್ರನ ಎಂಟ್ರಿ ಯಾವಾಗ ಗೊತ್ತಾ ?
)
IIFA 2024 ಅಬುಧಾಬಿಯಲ್ಲಿ ನಡೆಯುತ್ತಿದ್ದು, ಕನ್ನಡದ ಅನೇಕ ಸ್ಟಾರ್ಸ್ ದುಬೈಗೆ ಹಾರಿದ್ದಾರೆ.
)
ಈ ವೇಳೆ IIFA 2024 ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ನಟ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ.
)
ವಿಜಯ್ ರಾಘವೇಂದ್ರ ತಮ್ಮ ಪುತ್ರನನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ವೀಸಾ ಸಮಸ್ಯೆಯಿಂದ ಆತ ದುಬೈಗೆ ಬರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಮಗನ ಸಿನಿರಂಗದ ಎಂಟ್ರಿ ಬಗ್ಗೆ ಪ್ರಶ್ನಿಸಿದಾಗ, ಆತ ಇನ್ನೂ 10 ನೇ ತರಗತಿ ಓದುತ್ತಿದ್ದಾನೆ. ಈಗಿನ ಕಾಲದಲ್ಲಿ ಸಿನಿರಂಗಕ್ಕೆ ಬರೋದು ಅಷ್ಟು ಸುಲಭವಲ್ಲ.
ಮಗನಿಗೆ ಬ್ಯುಸಿನೆಸ್ ಸ್ಟಡೀಸ್‌ನಲ್ಲಿ ಆಸಕ್ತಿಯಿದೆ. ಆತ ತನ್ನದೇ ಪ್ರಪಂಚದಲ್ಲಿದ್ದಾನೆ. ಅವನ ಪಾಡಿಗೆ ಅವನನ್ನು ಬಿಟ್ಟಿದ್ದೇನೆ.
ನಾವೆಲ್ಲ ಬಂದಾಗ ಇದ್ದ ಸಿನಿರಂಗವೇ ಬೇರೆ.. ಈಗ ಆದ ಬದಲಾವಣೆಗಳೇ ಬೇರೆ. ಎಲ್ಲವನ್ನೂ ಕಲಿತು ಸಿನಿಮಾಗಳಿಗೆ ಬರಬೇಕು ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.