ನಿಮಗೆ ಗೊತ್ತೆ..? ಭಾರತದಲ್ಲಿ ಯಾವುದೇ ಕಾರಣಕ್ಕೂ ಈ 5 ಪುಸ್ತಕಗಳನ್ನು ಓದುವಂತಿಲ್ಲ..
ಸಲ್ಮಾನ್ ರಶ್ದಿಯವರ ಪುಸ್ತಕ ದಿ ಸೈಟಾನಿಕ್ ವರ್ಸಸ್ (The Satanic Verses) ಅನ್ನು 1988 ರಲ್ಲಿ ಪ್ರಕಟಿಸಲಾಯಿತು. ಇಸ್ಲಾಂ ಧರ್ಮದ ಪ್ರವಾದಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಮಾನಕರ ಅಭಿಪ್ರಾಯಗಳ ಬರಹದಿಂದಾಗಿ ಈ ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಯಿತು. ಇದು ಪ್ರಪಂಚದಾದ್ಯಂತ ಭಾರೀ ವಿವಾದವನ್ನು ಉಂಟುಮಾಡಿತು. ಭಾರತದಲ್ಲಿ ಮಾತ್ರವಲ್ಲದೆ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿಯೂ ನಿಷೇಧಿಸಲ್ಪಟ್ಟಿತು.
ವೆಂಡಿ ಟೋನಿಕರ್ ಅವರ ದಿ ಹಿಂದೂ: ಆನ್ ಆಲ್ಟರ್ನೇಟಿವ್ ಹಿಸ್ಟರಿ ಪುಸ್ತಕವನ್ನು 2014 ರಲ್ಲಿ ಪ್ರಕಟಿಸಲಾಯಿತು. ಹಿಂದೂ ಧರ್ಮವನ್ನು ಅವಮಾನಿಸುವ ರೀತಿಯಲ್ಲಿ ಬರೆಯಲಾಗಿದೆ ಎಂಬ ಆರೋಪದ ಮೇಲೆ ಈ ಪುಸ್ತಕವನ್ನು ನಿಷೇಧಿಸಲಾಯಿತು.
ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರ ವಿ.ಎಸ್. ನೈಪಾಲ್ ಅವರ ಪುಸ್ತಕ ಆನ್ ಏರಿಯಾ ಆಫ್ ಡಾರ್ಕ್ನೆಸ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತ ವಿರೋಧಿ ಕಾಮೆಂಟ್‌ಗಳನ್ನು ಒಳಗೊಂಡಿರುವ ಮತ್ತು ಭಾರತವನ್ನು ನಕಾರಾತ್ಮಕವಾಗಿ ಚಿತ್ರಿಸಿದ ಕಾರಣ ಪುಸ್ತಕವನ್ನು ದೇಶದಲ್ಲಿ ನಿಷೇಧಿಸಲಾಯಿತು.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು CIA ಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪದ ನಂತರ ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಸೀಮರ್ ಹರ್ಜ್ ಅವರು ಬರೆದ ಪುಸ್ತಕ ದಿ ಪ್ರೈಸ್ ಆಫ್ ಪವರ್ ಅನ್ನು ನಿಷೇಧಿಸಲಾಯಿತು.
ದಿ ಪಾಲಿಯೆಸ್ಟರ್ ಪ್ರಿನ್ಸ್ ಪುಸ್ತಕವನ್ನು ಭಾರತದಲ್ಲಿಯೂ ನಿಷೇಧಿಸಲಾಗಿದೆ. ಲೇಖಕ ಹಮೀಶ್ ಮ್ಯಾಕ್ಡೊನಾಲ್ಡ್ ಬರೆದ ಪುಸ್ತಕವನ್ನು ಭಾರತೀಯ ಉದ್ಯಮಿ ಅಂಬಾನಿ ಕುಟುಂಬದ ಬಗ್ಗೆ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ನಿಷೇಧಿಸಲಾಗಿದೆ.. ಈ ಮೇಲಿನ ಯಾವ ಪುಸ್ತಕವೂ ಸಹ ನಮ್ಮ ದೇಶದಲ್ಲಿ ದೊರೆಯುವುದಿಲ್ಲ..