Oldest Book Market in the World: ಪ್ರಪಂಚದ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆ ಯಾವುದು ಗೊತ್ತಾ? ಇಲ್ಲಿಯ ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರ

Sat, 07 Jan 2023-7:56 am,

ಜಗತ್ತಿನಲ್ಲಿ ಇಂದಿಗೂ ಅನೇಕ ಪುಸ್ತಕ ಪ್ರೇಮಿಗಳಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್ ಹ್ಯಾಂಡಲ್ ಪ್ರಪಂಚದ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆಯ ಬಗ್ಗೆ ಹೇಳಿದ್ದು ಅದು ವೈರಲ್ ಆಗಿದೆ. Bayt Al Fun ಖಾತೆಯ ಟ್ವಿಟರ್ ಹ್ಯಾಂಡಲ್, ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಲ್-ಮುತಾನಬಿ ಸ್ಟ್ರೀಟ್‌ನ ಛಾಯಾಚಿತ್ರಗಳು ಮತ್ತು ವೀಡಿಯೊಗಳ ಮೂಲಕ ವಿವರಿಸಿದೆ.

ಅಲ್-ಮುತಾನಬಿ ಸ್ಟ್ರೀಟ್ ಬಾಗ್ದಾದ್‌ನಲ್ಲಿದೆ. ಇಲ್ಲಿ ಐತಿಹಾಸಿಕ ಪುಸ್ತಕ ಮಾರುಕಟ್ಟೆ ಇದೆ. ಈ ಮಾರುಕಟ್ಟೆ ಪ್ರತಿದಿನ ಚಾಲೂ ಆಗಿದ್ದರೂ ಸಹ ಶುಕ್ರವಾರದಂದು ಹೆಚ್ಚಿನ ಸಂಚಾರವಿರುತ್ತದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಪುಸ್ತಕಗಳನ್ನು ಓದುತ್ತಾರೆ. ಕೆಲವರು ಖರೀದಿಸುತ್ತಾರೆ.

ಈ ಮಾರುಕಟ್ಟೆಯ ವಿಶೇಷವೆಂದರೆ ಇಲ್ಲಿ ರಾತ್ರಿಯ ವೇಳೆಯೂ ಸಹ ಬೀದಿಗಳಲ್ಲಿ ಪುಸ್ತಕಗಳನ್ನು ಹರಡಿಡಲಾಗುತ್ತದೆ. ಇಲ್ಲಿಗೆ ಬಂದು ಜನರು ಓದಬಹುದು. ಮುತಾನಬ್ಬಿ ಬೀದಿಯು ಬಾಗ್ದಾದ್‌ನ ಪುಸ್ತಕ ಮಾರಾಟದ ಐತಿಹಾಸಿಕ ಕೇಂದ್ರವಾಗಿದೆ. ಈ ಸ್ಥಳವನ್ನು ಪ್ರಾಚೀನ ಕಾಲದಿಂದಲೂ ಬಾಗ್ದಾದ್‌ನ ಸಾಹಿತ್ಯಿಕ ಮತ್ತು ಬೌದ್ಧಿಕ ಸಮುದಾಯದ ಆತ್ಮವೆಂದು ಪರಿಗಣಿಸಲಾಗಿದೆ.

ಅಲ್-ಮುತಾನಬ್ಬಿ ಸ್ಟ್ರೀಟ್ ತನ್ನ ಪುಸ್ತಕ ಮಾರುಕಟ್ಟೆಯಿಂದಾಗಿ ಕನಿಷ್ಠ 8 ನೇ ಶತಮಾನದಿಂದಲೂ ಎಲ್ಲಾ ಧರ್ಮಗಳ ಬರಹಗಾರರಿಗೆ ಆಶ್ರಯವಾಗಿದೆ ಎಂದು ಹೇಳಲಾಗುತ್ತದೆ. ಯುದ್ಧ, ನಿರ್ಲಕ್ಷ್ಯ ಮತ್ತು ಅಸ್ಥಿರತೆಯ ಬೂದಿಯಿಂದ ಮೇಲೇರುತ್ತಿರುವ ಬಾಗ್ದಾದ್‌ನ ಈ ತಾಣವು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಈ ಮುತಾನಬ್ಬಿ ಬೀದಿ ಕಾಲಕಾಲಕ್ಕೆ ಪುನರುಜ್ಜೀವನಗೊಂಡಿದೆ.

ಈ ಅಲ್-ಮುತಾನಬ್ಬಿ ಬೀದಿಯನ್ನು ಮೊದಲು 1932 ರಲ್ಲಿ ಕಿಂಗ್ ಫೈಸಲ್ I ಸ್ಥಾಪಿಸಿದರು. ಇದಕ್ಕೆ 10 ನೇ ಶತಮಾನದ ಪ್ರಸಿದ್ಧ ಕವಿ ಅಬುಲ್ ತಯ್ಯಬ್ ಅಲ್-ಮುತಾನಬ್ಬಿ ಅವರ ಹೆಸರನ್ನು ಇಡಲಾಯಿತು.

ಈ ಮಾರುಕಟ್ಟೆಯು ಹಳೆಯ ಬಾಗ್ದಾದ್‌ನ ಹೃದಯಭಾಗದಲ್ಲಿರುವ ಅಲ್-ಮುತಾನಬಿಯಲ್ಲಿದೆ. ಸಾಮಾನ್ಯವಾಗಿ ಶುಕ್ರವಾರದಂದು ವಿದ್ಯಾರ್ಥಿಗಳು ಮತ್ತು ಯುವಕರು ಇಲ್ಲಿಗೆ ಬಂದು ಹೋಗುತ್ತಾರೆ. ಪ್ರತಿನಿತ್ಯ ಬುದ್ದಿಜೀವಿಗಳು ಮತ್ತು ಹಳೆಯ ಪುಸ್ತಕ ಪ್ರೇಮಿಗಳು ಇಲ್ಲಿಗೆ ಆಗಮಿಸುವುದು ಸರ್ವೇ ಸಾಮಾನ್ಯ.

ಕಲಾ ಪ್ರದರ್ಶನಗಳು, ಗ್ಯಾಲರಿ, ಪುಸ್ತಕ ಮೇಳಗಳು ಮತ್ತು ಉತ್ಸವಗಳು ಅಲ್-ಮುತಾನಬಿಯ ಬೀದಿಗಳಲ್ಲಿ ನಡೆಯುತ್ತವೆ. ಇದು ಸಾಂಸ್ಕೃತಿಕ ಪುನರುಜ್ಜೀವನವನ್ನು ಪ್ರತಿನಿಧಿಸುತ್ತದೆ.

ಅಲ್-ಮುತಾನಬಿ ಸ್ಟ್ರೀಟ್ ನೂರಾರು ಪುಸ್ತಕ ಮಳಿಗೆಗಳು ಮತ್ತು ಹೊರಾಂಗಣ ಪುಸ್ತಕ ಮಳಿಗೆಗಳು, ಕೆಫೆಗಳು, ಸ್ಟೇಷನರಿ ಅಂಗಡಿಗಳು ಮತ್ತು ಟೀ ಸ್ಟಾಲ್‌ಗಳಿಂದ ಕೂಡಿದೆ. ಸುಮಾರು ಒಂದು ದಶಕದ ಹಿಂದೆ ಬಾಂಬ್ ಸ್ಫೋಟಗಳ ಹೊರತಾಗಿಯೂ, ಅಲ್ ಮುತಾನಬ್ಬಿಯ ಆತ್ಮವು ಹಿಂದೆಂದಿಗಿಂತಲೂ ಬಲವಾಗಿ ಉಳಿದಿದೆ. (ಚಿತ್ರ ಕೃಪೆ: Bayt Al Fann & Ali Khadr)

ZEENEWS TRENDING STORIES

By continuing to use the site, you agree to the use of cookies. You can find out more by Tapping this link