ಜಗತ್ತಿನಲ್ಲೇ ಮೊಟ್ಟ ಮೊದಲ ಲವ್ ಮ್ಯಾರೇಜ್ ಯಾರದ್ದು ಗೊತ್ತಾ? ಪ್ರತಿಯೊಬ್ಬರಿಗೂ ತಿಳಿದಿರುವ ಅತ್ಯಂತ ಮೆಚ್ಚಿನ ಜೋಡಿ ಇದು..
ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್‌ಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಅರೇಂಜ್ ಮ್ಯಾರೇಜ್ ಕಾಣಸಿಗುವುದೇ ಅಪರೂಪ ಎಂಬಂತಾಗಿದೆ. ಮದುವೆ ಎಂಬುದು ಸ್ವರ್ಗದಲ್ಲೇ ನಿರ್ಣಯವಾಗುವಂತಹ ಬಂಧ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅದು ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ ಮ್ಯಾರೇಜ್ ಆಗಿರಲಿ.
ಅಂದಹಾಗೆ ಜಗತ್ತಿನ ಮೊಟ್ಟ ಮೊದಲ ಪ್ರೇಮ ವಿವಾಹ ಆಗಿದ್ದು ಯಾರು ಎಂಬುದು ನಿಮಗೆ ತಿಳಿದಿದೆಯೇ? ಕೆಲವೊಂದು ಪುರಾಣಗಳಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಭಗವಾನ್ ಶಿವ ಮತ್ತು ಪಾರ್ವತಿಯ ಪ್ರೇಮಕಥೆಯು ಹಿಂದೂ ಪುರಾಣಗಳಲ್ಲಿ ಬಹಳ ಮಹತ್ವವನ್ನು ಪಡೆದಿರುವಂತಹದ್ದು. ಇದು ಕೇವಲ ವಿವಾಹವಾಗಿರಲಿಲ್ಲ... ಈ ಪಾಣಿಗ್ರಹಣವು ಪ್ರೀತಿ ಮತ್ತು ಅಪಾರ ಕಾಯುವಿಕೆಯ ನಂತರ ಒಲಿದ ಮಹಾತಪಸ್ಸಿನ ಪ್ರತಿಫಲ ಎಂದೇ ಹೇಳಬಹುದು.
ಶಿವ ಮತ್ತು ಪಾರ್ವತಿಯ ಪ್ರೇಮಕಥೆಯು ಆಳವಾದ ಪ್ರೀತಿ ಮತ್ತು ಭಕ್ತಿಯ ಸಾರಾಂಶವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ಶಿವ ಸಂಚಾರದಲ್ಲಿದ್ದಾಗ ಮಾತೆ ಪಾರ್ವತಿಯನ್ನು ಕಂಡು ಪ್ರೇಮಪಾಶಕ್ಕೆ ಬೀಳುತ್ತಾರೆ. ಆ ಕಾಲದ ಸಂಪ್ರದಾಯಗಳ ಪ್ರಕಾರ, ನಿಶ್ಚಯಿತ ವಿವಾಹಗಳು ಪ್ರಚಲಿತದಲ್ಲಿದ್ದವು ಮತ್ತು ಪ್ರೇಮ ವಿವಾಹಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ.
ಆದರೆ, ಶಿವ-ಪಾರ್ವತಿಯರ ಪ್ರೇಮ ಎಷ್ಟು ಗಟ್ಟಿಯಾಗಿತ್ತೆಂದರೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಲು ನಿರ್ಧರಿಸಿದ್ದರು. ಪ್ರಪಂಚದಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಪ್ರೇಮವಿವಾಹವಾದ ಮೊದಲ ಪುರಾವೆ ಇದೇ ಆಗಿದೆ. ಇದೇ ಕಾರಣದಿಂದ ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹವನ್ನು ಈ ಪ್ರಪಂಚದ ಮೊದಲ ಪ್ರೇಮ ವಿವಾಹವೆಂದು ಪರಿಗಣಿಸಲಾಗಿದೆ.
ಇಂದಿನ ಜಗತ್ತಿನಲ್ಲಿ ಪ್ರೇಮ ವಿವಾಹಗಳು ಹೆಚ್ಚು ಜನಪ್ರಿಯವಾಗಿವೆ. ಪ್ರೇಮ ವಿವಾಹದ ವ್ಯಾಖ್ಯಾನವು ಪರಸ್ಪರ ಪ್ರೀತಿ ಮತ್ತು ಪರಸ್ಪರ ಆಕರ್ಷಣೆಯ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳು ಮದುವೆಯಾಗಲು ನಿರ್ಧರಿಸುವುದಾಗಿದೆ.
ಪಾರ್ವತಿ ಮತ್ತು ಶಿವನ ಪ್ರೇಮಕಥೆಯು ಇದುವರೆಗೆ ಹೇಳಲಾದ ಶ್ರೇಷ್ಠ ಪ್ರೇಮಕಥೆಗಳಲ್ಲಿ ಒಂದಾಗಿದೆ. ನಿಜವಾದ ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂಬುದಕ್ಕೆ ಇವರ ಪ್ರೇಮಕಥೆಯೇ ಸಾಕ್ಷಿ.