ನಟಿ ಕಂಗನಾ ರಣಾವತ್ ಅಕ್ಕ ಯಾರು ಗೊತ್ತಾ? ಅಂದು ಪ್ರಪೋಸ್ ರಿಜೆಕ್ಟ್ ಮಾಡಿದಕ್ಕೆ ಈಕೆ ಮೇಲಾಗಿತ್ತು ಆಸಿಡ್ ಅಟ್ಯಾಕ್!!
ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್ ಬಗ್ಗೆ ಅನೇಕರಿಗೆ ತಿಳಿದಿರಬಹುದು. ಆದರೆ ಈಕೆ ಹಿನ್ನೆಲೆ, ಈಕೆ ಬದುಕಿನಲ್ಲಿ ಅನುಭವಿಸಿದ ಸಂಕಷ್ಟ ಅಂತಿಂಥದಲ್ಲ.. ಆ ಬಗ್ಗೆ ಕೆಲವರಿಗಷ್ಟೇ ತಿಳಿದಿರುತ್ತದೆ.
ಕಂಗನಾ ಸದ್ಯ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದಲೇ ಸದ್ದು ಮಾಡುವ ಈ ನಟಿ, ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಸದ್ಯ ಸಂಸದೆಯಾಗಿದ್ದಾರೆ.
ಕಂಗನಾ ರಣಾವತ್ ಸಹೋದರಿ ಹೆಸರು ರಂಗೋಲಿ. ತಂಗಿಯಂತೇ ಸುಂದರಿಯಾಗಿದ್ದ ರಂಗೋಲಿಗೆ ಕಾಲೇಜು ದಿನಗಳಲ್ಲಿ ಲವ್ ಪ್ರಪೋಸ್ ಬರುತ್ತಿತ್ತಂತೆ. ಆದರೆ ಆ ಬಗ್ಗೆ ಹೆಚ್ಚು ಗಮನ ನೀಡದಿದ್ದ ರಂಗೋಲಿ ಅವುಗಳನ್ನು ತಿರಸ್ಕಾರ ಮಾಡಿದ್ದರು.
ಆದರೆ ಒಂದು ದಿನ ಒಬ್ಬಹುಡುಗನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದಕ್ಕೆ, ಆತ ರಂಗೋಲಿ ಮೇಲೆ 1 ಲೀಟರ್ ಆಸಿಡ್ ಎಸೆದಿದ್ದನಂತೆ.
ಅಂದಹಾಗೆ ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇನ್ನು ಈ ದಾಳಿಯ ನಂತರ ನನಗೆ 54 ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದು ರಂಗೋಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ಬಹಿರಂಗಪಡಿಸಿದ್ದರು.
ಇದಾದ ನಂತರ ಪೋಸ್ಟ್ ಶೇರ್ ಮಾಡಿದ್ದ ನಟಿ ಕಂಗನಾ, "ನನ್ನ ಸಹೋದರಿಗೆ ಏಕೆ ಹೀಗೆ ಮಾಡಲಾಯಿತು. ನಮ್ಮ ಪೋಷಕರು ಸುಂದರ, ಬುದ್ಧಿವಂತ ಮತ್ತು ಆತ್ಮವಿಶ್ವಾಸದ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕಾಗಿಯೇ? ಹೆಣ್ಣು ಮಗುವಿಗೆ ಈ ಜಗತ್ತು ಒಳ್ಳೆಯದಲ್ಲ.. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ ಸಮಯ ಬಂದಿದೆ. ಇದು ನಮ್ಮ ಮಕ್ಕಳನ್ನು ರಕ್ಷಿಸುತ್ತದೆ" ಎಂದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದರು.