ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!
ವಿಕ್ರಮ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ಅಭಿನಯದಿಂದ ಎಲ್ಲರಿಗೂ ಮೋಡಿ ಮಾಡಿದ ನಟ..
ಸುಮಾರು 10 ವರ್ಷಗಳ ಕಾಲ ತಮಿಳು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಅವರು ಉನ್ನತ ಸ್ಥಾನವನ್ನು ತಲುಪಿದರು.
ಆರಂಭಿಕ ಹಂತದಲ್ಲಿ ಸರಿಯಾದ ಸಿನಿಮಾ ಅವಕಾಶ ಸಿಗದೇ ಸೋಲು ಕಂಡಿದ್ದ ವಿಕ್ರಮ್ ಗೆ ಸ್ಟಾರ್ ಸ್ಥಾನ ನೀಡಿದ ಸಿನಿಮಾ ಎಂದರೇ 'ಸೇತು'.
‘ಸೇತು’ ಚಿತ್ರದ ಅದ್ಧೂರಿ ಯಶಸ್ಸಿನ ನಂತರ ತಮಿಳು ಚಿತ್ರರಂಗದಲ್ಲಿ ವಿಕ್ರಮ್ ಅವರ ಸ್ಥಾನ ಸೃಷ್ಟಿಯಾಯಿತು..
ಲೆಕ್ಕವಿಲ್ಲದಷ್ಟು ಹಿಟ್ ಚಿತ್ರಗಳನ್ನು ನೀಡಿರುವ ವಿಕ್ರಮ್ ಹಲವು ಪ್ಲಾಪ್ ಕೂಡ ನೀಡಿದ್ದಾರೆ. ಆದರೆ, ನಟ ವಿಕ್ರಮ್ ತಮ್ಮದೇ ಆದ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಅದರಿಂದಲೇ ಅಗ್ರಸ್ಥಾನವನ್ನು ತಲುಪುತ್ತಿದ್ದಾರೆ.
ವಿಕ್ರಮ್ 1980 ರ ದಶಕದ ಅಂತ್ಯದಲ್ಲಿ ಶೈಲಜಾ ಬಾಲಕೃಷ್ಣನ್ ಅವರನ್ನು ಭೇಟಿಯಾದರು.. 1992 ರಲ್ಲಿ ಗುರುವಾಯೂರ್ ದೇವಸ್ಥಾನದಲ್ಲಿ ಅವರನ್ನು ವಿವಾಹವಾದರು. ಬಳಿಕ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಕ್ರೈಸ್ತ ಸಂಪ್ರದಾಯದ ಪ್ರಕಾರ ಅವರ ವಿವಾಹ ನೆರವೇರಿತು.
ವಿಕ್ರಮ್ ಅವರ ಪತ್ನಿ ಶೈಲಜಾ ಅವರು ಚೆನ್ನೈನ ದೊಡ್ಡ ಶಾಲೆಯೊಂದರಲ್ಲಿ ಮನೋವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಕ್ರಮ್ ಮತ್ತು ಶೈಲಜಾ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಪುತ್ರ ಧ್ರುವ ತಮಿಳು ಚಿತ್ರರಂಗದಲ್ಲಿ ನಟ. ಮಗಳು ಅಕ್ಷಿತಾ..