ಪ್ರಿಯಾಂಕಾ ಚೋಪ್ರಾ ಅತ್ತಿಗೆ ಕೂಡ ಖ್ಯಾತ ನಟಿ! ದೇಸಿ ಬಾರ್ಬಿ ಅಂದಕ್ಕೆ ಸವಾಲು ಹಾಕ್ತಾಳೆ ಈ ಸೌತ್ ಬ್ಯೂಟಿ!
ಬಾಲಿವುಡ್‌ನ 'ದೇಸಿ ಗರ್ಲ್' ಅಂದರೆ ನಟಿ ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ ಮನೆಮಾಡಲಿದೆ.. ಯಾಕೆಂದರೆ ಪ್ರಿಯಾಂಕಾ ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆಯಾಗಲಿದ್ದಾರೆ.. \
ಅಣ್ಣನ ಮದುವೆಗೆಂದು ಪ್ರಿಯಾಂಕಾ ಭಾರತಕ್ಕೆ ಬಂದಿದ್ದಾರೆ. ಇದೀಗ ಈ ಮೂಲಕ ಆಕೆಯ ಭಾವಿ ಸೊಸೆ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.
ಪ್ರಿಯಾಂಕಾ ಅವರ ಅತ್ತಿಗೆಯ ಹೆಸರು ನೀಲಂ ಉಪಾಧ್ಯಾಯ. ನೀಲಂ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಅವರು 2012 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತೆಲುಗು ಚಿತ್ರ 'ಮಿಸ್ಟರ್ 7' ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ನೀಲಂ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ಒಂಬತ್ತು ವರ್ಷಗಳಿಂದ ದಕ್ಷಿಣ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನೀಲಂ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಸಿದ್ಧಾರ್ಥ್ ಚೋಪ್ರಾ ಮತ್ತು ನೀಲಂ ಉಪಾಧ್ಯಾಯ ಅವರ ನಿಶ್ಚಿತಾರ್ಥವಾಗಿತ್ತು.. ಆಗಲೂ ಪ್ರಿಯಾಂಕಾ ಪತಿಯೊಂದಿಗೆ ಭಾರತಕ್ಕೆ ಬಂದಿದ್ದರು.
ಇದಕ್ಕೂ ಮುನ್ನ ಸಿದ್ಧಾರ್ಥ್ ಇಶಿತಾ ಕುಮಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರು 2019 ರಲ್ಲಿ ಮದುವೆಯಾಗಲು ಹೊರಟಿದ್ದರು. ಆದರೆ ಅವರ ಹಲವು ಕಾರಣಗಳಿಂದ ಸಂಬಂಧ ಕೊನೆಗೊಂಡಿತು.
ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ಸಿನಿಮಾ ನಿರ್ಮಾಪಕ. ಅವರು ಮೊದಲು ನೀಲಂ ಅವರನ್ನು ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಕ್ರಮೇಣ ಇವರಿಬ್ಬರು ಸ್ನೇಹಿತರಾದರು ಮತ್ತು ಆ ಸ್ನೇಹ ಪ್ರೀತಿಗೆ ತಿರುಗಿತು. ಈಗ ಶೀಘ್ರದಲ್ಲೇ ಇವರಿಬ್ಬರೂ ಮದುವೆಯಾಗಲಿದ್ದಾರೆ.