ಸಂಜು ಸ್ಯಾಮ್ಸನ್ ಪತ್ನಿ ಯಾರು ಗೊತ್ತಾ? ಈಕೆಯ ಅಂದದ ಮುಂದೆ ಅನುಷ್ಕಾ, ಸಾಕ್ಷಿ ಯಾವ ಲೆಕ್ಕಾ! ಅಂಥಾ ಸೌಂದರ್ಯದ ಗಣಿ
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಐಪಿಎಲ್ ಇರಲಿ ಅಥವಾ ಇತರೆ ಪಂದ್ಯಗಳಿರಲಿ, ತಮ್ಮ ಅದ್ಭುತ ಪ್ರದರ್ಶನ ತೋರದೆ ಇರಲಾರರು..
ಇನ್ನು ಇವರ ನಿಜ ಜೀವನ ಕೂಡ ತುಂಬಾ ರೋಮ್ಯಾಂಟಿಕ್ ಆಗಿದೆ. ನಾವಿಂದು ಇವರ ಪತ್ನಿ ಮತ್ತು ಲವ್ ಸ್ಟೋರಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.
ಸಂಜು ಲವ್ ಸ್ಟೋರಿ ಶುರುವಾಗಿದ್ದು ಫೇಸ್ ಬುಕ್ ಮೂಲಕ. ಚಾರುಲತಾ ರಮೇಶ್ ಎಂಬವರಿಗೆ ರಿಕ್ವೆಸ್ಟ್ ಕಳಿಸಿ, ಆ ರಿಕ್ವೆಸ್ಟ್ ಮದುವೆಯವರೆಗೂ ಹೋಗಿದೆ.
ಸಂಜು ತನ್ನ ಪತ್ನಿ ಚಾರುಲತಾಳನ್ನು ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಭೇಟಿಯಾದರು, ಅಲ್ಲಿ ಇಬ್ಬರೂ ಸಹಪಾಠಿಗಳು. ಅಂದಹಾಗೆ ಚಾರುಲತಾಳಿಗೆ ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು ಸಂಜು. ಆದರೆ ಆ ರಿಕ್ವೆಸ್ಟ್ ಅಕ್ಸೆಪ್ಟ್ ಆಗಿದ್ದು ತಮಾಷೆಯ ಸಂಗತಿ.
ಸಂಜು ಕ್ರಿಶ್ಚಿಯನ್ ಆಗಿದ್ದರೆ, ಚಾರುಲತಾ ರಮೇಶ್ ಹಿಂದೂ ನಾಯರ್. ಹೀಗಾಗಿ ವಿಶೇಷ ವಿವಾಹ ಕಾಯ್ದೆಯಡಿ ಇಬ್ಬರೂ ವಿವಾಹವಾಗಿದ್ದರು. ಇನ್ನು ಈ ಜೋಡಿ ಮಾಧ್ಯಮಗಳ ಲೈಮ್‌ಲೈಟ್‌ನಿಂದ ದೂರ ಉಳಿದಿದ್ದಾರೆ.