ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!

Mon, 09 Sep 2024-3:40 pm,

ರಮ್ಯಾ ನಿಜನಾಮ ದಿವ್ಯ ಸ್ಪಂದನ. 29 ನವೆಂಬರ್ 1982‌ ರಂದು ಜನಿಸಿದರು. ಸಿನಿರಂಗಕ್ಕೆ ಎಂಟ್ರಿ ಕೊಡುವಾಗ ದಿವ್ಯ ಸ್ಪಂದನ ರಮ್ಯಾ ಆದರು. ರಾಜ್‌ ಕುಮಾರ್‌ ಅವರ ಪತ್ನಿ ಪಾರ್ವತಮ್ಮ ಹೆಸರನ್ನು ಬದಲಿಸಿದರಂತೆ.

ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ. ಎಸ್ಎಂ ಕೃಷ್ಣ ಅವರಿಗೆ ರಂಜಿತಾ ಅತ್ಯಾಪ್ತರು. ಮಂಡ್ಯ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯೆ ರಂಜಿತಾ. ಇವರು ಸಾಕಷ್ಟು ಪ್ರಭಾವಿ ಮಹಿಳೆಯಾಗಿದ್ದಾರೆ. 

ನಟಿ ರಮ್ಯಾ 2003 ರಲ್ಲಿ ಅಪ್ಪು ಸಿನಿಮಾದ ಮೂಲಕ ಹೀರೋಯಿನ್‌ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. 

ಕನ್ನಡ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ರಮ್ಯಾ ನಟಿಸಿದ್ದಾರೆ. ಸಿನಿರಂಗದಲ್ಲಿ ಮಾತ್ರವಲ್ಲದೇ ರಮ್ಯಾ ರಾಜಕೀಯದಲ್ಲೂ ತೊಡಗಿಕೊಂಡವರು. ಮಂಡ್ಯ ಸಂಸದೆಯಾಗಿದ್ದರು.

ನಟಿ ರಮ್ಯಾ ತಂದೆ ಆರ್‌ಟಿ ನಾರಾಯಣ್. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರ್‌ಟಿ ನಾರಾಯಣ್ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು ಎಂಬುದು ಗಮನಾರ್ಹ.

ಆರ್‌ಟಿ ನಾರಾಯಣ್ ಅಪ್ಪಣೆಯಿಲ್ಲದೇ ವಿಧಾನಸೌಧದಲ್ಲಿ ಹುಲ್ಲುಕಟ್ಟಿಯೂ ಅಲ್ಲಾಡುತ್ತಿರಲಿಲ್ಲ ಎಂಬ ಮಾತಿದೆ.

ನಟಿ ರಮ್ಯಾ ಇದುವರೆಗೂ ಎಲ್ಲಿಯೂ ತಮ್ಮ ತಂದೆಯ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link