ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತೇ? ಆತ ಭಾರತದವನೇ... 39 ಸಿಕ್ಸರ್‌, 14 ಬೌಂಡರಿ ಮೂಲಕ ತ್ರಿಶತಕ ಸಿಡಿಸಿದ್ದ ದಿಗ್ಗಜ ದಾಂಡಿಗನೀತ

Tue, 05 Nov 2024-1:54 pm,

ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಿಡಿ... ಶತಕ ಬಾರಿಸೋದೇ ದೊಡ್ಡ ಮಾತು. ಆದರೆ ಇಲ್ಲೊಬ್ಬ ಕ್ರಿಕೆಟಿಗ ತ್ರಿಶತಕ ಬಾರಿಸಿ ಸಾಧನೆ ಮಾಡಿದ್ದಾನೆ. ಆತ ಯಾರು? ಯಾವ ಟೂರ್ನಿಯಲ್ಲಿ ಈ ಸಾಧನೆ ಮಾಡಲಾಗಿದೆ? ಎಂಬುದನ್ನು ತಿಳಿಯೋಣ.

T20 ಕ್ರಿಕೆಟ್‌ʼನಲ್ಲಿ ಓರ್ವ ಬ್ಯಾಟ್ಸ್‌ಮನ್ ಒಂದು ಇನ್ನಿಂಗ್ಸ್‌ನಲ್ಲಿ ಒಟ್ಟು 120 ಎಸೆತಗಳಲ್ಲಿ ಶತಕ ಗಳಿಸುವುದೆಂದರೆ ದೊಡ್ಡ ಮಾತು. ದ್ವಿಶತಕ ಬಾರಿಸಿದರೆ ಕೇಳುವುದೇ ಬೇಡ.. ಅದೊಂದು ಅದ್ಭುತವೇ!! ಆದ್ರೆ ಈ ಕ್ರಿಕೆಟಿಗ ಮಾತ್ರ ತ್ರಿಶತಕ ಸಿಡಿಸಿ, ಇಡೀ ಕ್ರಿಕೆಟ್‌ ಲೋಕವನ್ನೇ ಅಚ್ಚರಿಗೀಡು ಮಾಡಿದ್ದಾನೆ

 

ಅಂದಹಾಗೆ ಆ ಕ್ರಿಕೆಟಿಗ ಮೋಹಿತ್ ಅಹ್ಲಾವತ್. ದೆಹಲಿಯಲ್ಲಿ ಆಯೋಜಿಸಲಾದ ಸ್ಥಳೀಯ ಪಂದ್ಯಾವಳಿಯಲ್ಲಿ ಮಾವಿ ಇಲೆವೆನ್ ಪರ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಮೋಹಿತ್, ಫ್ರೆಂಡ್ಸ್ ಇಲೆವೆನ್ ಬೌಲರ್‌ಗಳನ್ನು ಬೆಂಡೆತ್ತಿದ್ದರು.   

 

72 ಎಸೆತಗಳಲ್ಲಿ 39 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ ತ್ರಿಶತಕ ಗಳಿಸಿದ್ದರು. 2017ರಲ್ಲಿ ಈ ಸಾಧನೆ ಮಾಡಿದ ಅವರು ಇತಿಹಾಸ ಸೃಷ್ಟಿಸಿದ್ದಲ್ಲದೆ, ಈ ದಾಖಲೆಯನ್ನು ಇದುವರೆಗೆ ಯಾರೂ ಮುರಿದಿಲ್ಲ.   

 

ದೆಹಲಿಯಲ್ಲಿ ನಡೆದ ಸ್ಥಳೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದರೂ ಮೋಹಿತ್ ಅಹ್ಲಾವತ್ ಐಪಿಎಲ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಅದಾದ ಬಳಿಕ ಮೋಹಿತ್ ದೆಹಲಿ ರಣಜಿ ತಂಡ ಮತ್ತು ಸರ್ವಿಸಸ್‌ ಪರ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡಿದ್ದಾರೆ.   

 

ನಂತರ 2015 ರಲ್ಲಿ ರಾಜಸ್ಥಾನ ತಂಡದ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅಂಕಿಅಂಶಗಳನ್ನು ಗಮನಿಸಿದರೆ, ಮೋಹಿತ್ ಪ್ರಥಮ ದರ್ಜೆ ಕ್ರಿಕೆಟ್‌ʼನಲ್ಲಿ 236 ರನ್ ಮತ್ತು ಲಿಸ್ಟ್ ಎ ಕ್ರಿಕೆಟ್‌ʼನಲ್ಲಿ 554 ರನ್ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link