ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿ
Actress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
ನಟಿಯ ಅಂದಕ್ಕೆ ಮರುಳಾಗದವರೇ ಇಲ್ಲ, ಆದರೆ ರೇಖಾ ಮಾತ್ರ ಕೊನೆಯ ವರೆಗೂ ಮದುವೆಯಾಗದೆ ಒಂಟಿಯಾಗಿ ಉಳಿದಿದ್ದಾರೆ. ನಟಿ ಪತಿ ಮಕ್ಕಳು ಸಂಸಾರ ಎನ್ನುವ ಸುಖ ಕಾಣದೆ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ.
ನಟಿ ರೇಖಾ ಒಂದಾನೊಂದು ಕಾಲದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಇಡೀ ಸಿನಿಮಾ ಇಂಡಸ್ಟ್ರಿಗೆ ಗೊತ್ತಿರುವ ವಿಚಾರ. ಆದರೆ, ಈ ಪ್ರೇಮ ವೈಫಲ್ಯದ ನಂತರ ನಟಿ ಯಾರನ್ನು ಮದುವೆ ಮಾಡಿಕೊಳ್ಳುವ ಉಪಾಯ ಮಾಡಲೇ ಇಲ್ಲ.
ನಟಿಯ ಹೆಸರು ಹಲವು ಸೆಲೆಬ್ರಿಟಿಗಳೊಂದಿಗೆ ಕೇಳಿ ಬಂತಾದರೂ, ಕೊನೆ ವರೆಗೂ ಈ ನಟಿ ಯಾರನ್ನೂ ಮದುವೆಯಾಗಿಲ್ಲ. ಆದರೆ ಈ ವಯಸ್ಸಿನಲ್ಲಿಯೂ ನಟಿ ತಮ್ಮ ಸೌಂದರ್ಯದಿಂದ ಎಲ್ಲರನ್ನು ಮರಳು ಮಾಡುತ್ತಿದ್ದಾರೆ.
ಎಷ್ಟೋ ಜನರಿಗೆ ಕಾಡುವ ಪ್ರಶ್ನೆ ಏನು ಎಂದರೆ, ನಟಿ ನಟನೆಯ ಮೂಲಕ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ವಾರಸ್ಸುದಾರರು ಇಲ್ಲ ಅಂದ್ರೆ ಈ ಆಸ್ತಿಯನು ಇಟ್ಟುಕೊಂಡು ನಟಿ ಏನು ಮಾಡುತ್ತಾರೆ ಎನ್ನುವುದು.
ಆದರೆ, ನಟಿ ರೇಖಾ ಮಾತ್ರ ತಮಗೆ ಮಕ್ಕಳಿಲ್ಲ ಎಂಬುವ ಭಾವನೆಯನ್ನು ಹೊರಹಾಕುವುದೇ ಇಲ್ಲ, ಏಕೆಂದರೆ ನಟಿಗೆ ಒಬ್ಬ ಮಗಳಿದ್ದಾಳೆ ಆಕೆ ಕೂಡ ಇಂಟಸ್ಟ್ರಿಯ ಸ್ಟಾರ್ ನಟಿ.
ನಟಿ ರೇಖಾ ಅವರ ಮನಸ್ಸಿಗೆ ಹತ್ತಿರವಾದ ಹಲವರು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ, ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು, ನಟಿ ರೇಖಾ ಅವರು ಹಲವು ಕಾರ್ಯಕ್ರಮಗಳಲ್ಲಿ ನಟಿ ದೀಪಿಕಾ ನನ್ನ ಮಗಳು ಎಂದು ಹೇಳಿಕೊಂಡಿದ್ದಾರೆ.
ರೇಖಾ ಅವರು ನಟಿ ದೀಪಿಕಾ ಪಡುಕೋಣೆ ಅವರನ್ನು ಬಹಳ ವಿಶೇಷವಾಗಿ ನೋಡುತ್ತಾರೆ, ಆಕೆಯನ್ನು ನೋಡಿದರೆ ನಟಿಗೆ ಅಗಾದ ಪ್ರೀತಿ. ಅದ್ದರಿಂದ ನಟಿಯನ್ನು ರೇಖಾ ತಮ್ಮ ಮಗಳು ಎಂದು ಹೇಳಿಕೊಳ್ಳುತ್ತಾರೆ.