RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ
ಟಾಟಾ ಐಪಿಎಲ್ 17ನೇ ಸೀಸನ್ ಮುನ್ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ, 13 ಕ್ಕೂ ಹೆಚ್ಚು ಕ್ರಿಕೆಟ್ ಆಡುವ ದೇಶಗಳ ಕ್ರಿಕೆಟ್ ಆಟಗಾರರು 10 ವಿವಿಧ ತಂಡಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮೊದಲು 2008ರಲ್ಲಿ ಆರಂಭವಾದಾಗ ಐಪಿಎಲ್ ಟೂರ್ನಿಯಲ್ಲಿ ಕೇವಲ 8 ತಂಡಗಳಿದ್ದವು, ಆದರೆ 2022ರಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ಸಂಖ್ಯೆ 10ಕ್ಕೆ ಏರಿದೆ.
ಅಂದಹಾಗೆ ಐಪಿಎಲ್’ನಲ್ಲಿರುವ ನೆಚ್ಚಿನ ತಂಡ, ಮಾಲೀಕರು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಅನೇಕರು ಇಚ್ಛಿಸುತ್ತಾರೆ. ಹೀಗಾಗಿ ನಾವಿಂದು ಆರ್ ಸಿ ಬಿಯ ಮಾಲೀಕರು ಯಾರು ಎಂಬುದನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
ಐಪಿಎಲ್ 17 ಸೀಸನ್’ಗಳನ್ನೂ ಪೂರ್ಣಗೊಳಿಸುತ್ತಿದ್ದರೂ ಇದುವರೆಗೆ ಆರ್ ಸಿ ಬಿ ಒಂದೇ ಒಂದು ಚಾಂಪಿಯನ್‌ಶಿಪ್ ಗೆದ್ದಿಲ್ಲ. ಕಳೆದ ಕೆಲವು ವರ್ಷಗಳಿಂದ ಆರ್ ಸಿ ಬಿ ಅಭಿಮಾನಿಗಳ ನೆಚ್ಚಿನ ತಂಡವಾಗಿದೆ. ವಿರಾಟ್ ಕೊಹ್ಲಿ ಈ ತಂಡದ ಪ್ರಮುಖ ಫೇಸ್ ಆಗಿದ್ದು, ಇಷ್ಟು ವರ್ಷಗಳ ಕಾಲ ತಂಡದಲ್ಲೇ ಇದ್ದದ ಬಲಿಷ್ಠ ವ್ಯಕ್ತಿಯಾಗಿದ್ದಾರೆ.
RCB ಐಪಿಎಲ್’ನ ಆರಂಭಿಕ ಮತ್ತು ಮೂಲ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಇದು ಪಂದ್ಯಾವಳಿಯ ಮೊದಲ ಋತುವಿನಿಂದ ಅಸ್ತಿತ್ವದಲ್ಲಿದೆ. ಹೆಸರೇ ಸೂಚಿಸುವಂತೆ ತಂಡವು ಕರ್ನಾಟಕದ ಬೆಂಗಳೂರಿನಲ್ಲದೆ. ಇದುವರೆಗೆ ಐಪಿಎಲ್’ನ ಎಲ್ಲಾ ಸೀಸನ್‌ಗಳನ್ನು ಆಡಿದ್ದರೂ ಒಂದೇ ಒಂದು ಚಾಂಪಿಯನ್‌ಶಿಪ್ ಗೆಲ್ಲದ ವಿಶಿಷ್ಟ ದಾಖಲೆಯನ್ನು ಆರ್‌ಸಿಬಿ ಹೊಂದಿದೆ.
ಆರ್ ಸಿ ಬಿ 2009, 2011 ಮತ್ತು 2016ರ ಐಪಿಎಲ್’ನಲ್ಲಿ ಫೈನಲ್ ತಲುಪಿತ್ತು. ಅಷ್ಟೇ ಅಲ್ಲದೆ 2020, 2021 ಮತ್ತು 2020 ರ ಐಪಿಎಲ್ ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತ್ತು. ಆದರೆ ಅಭಿಮಾನಿಗಳು ಮತ್ತು ತಂಡಗಳಿಗೆ ಟ್ರೋಫಿ ಕನಸಾಗಿಯೇ ಉಳಿದಿದೆದ.
2008 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಕಿಂಗ್ ಫಿಶರ್ ಏರ್‌ಲೈನ್ಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್’ನ ಮಾಜಿ ಅಧ್ಯಕ್ಷ ವಿಜಯ್ ಮಲ್ಯ ಖರೀದಿಸಿದ್ದರು. ತಂಡದ ಹರಾಜಿನ ಸಮಯದಲ್ಲಿ RCB ಗಾಗಿ ಎರಡನೇ ಅತಿ ಹೆಚ್ಚು ಬಿಡ್ $111.6 ಮಿಲಿಯನ್ ಆಗಿತ್ತು. ಆದರೆ, ವಿಜಯ್ ಮಲ್ಯ ಮತ್ತು ಆರ್‌ಸಿಬಿಯ ಪ್ರಯಾಣವು 2016 ಕ್ಕೆ ಸೀಮಿತವಾಗಿತ್ತು.
ಭಾರಿ ಸಾಲವನ್ನು ಪಾವತಿಸದೆ ಜೈಲು ತಪ್ಪಿಸಲು ದೇಶವನ್ನು ತೊರೆಯಬೇಕಾಯಿತು. ಸದ್ಯ ವಿಜಯ ಮಲ್ಯ ಪರಾರಿಯಾಗಿದ್ದು, ವಾಂಟೆಡ್ ಕ್ರಿಮಿನಲ್ ಎಂದು ಹೇಳಲಾಗುತ್ತಿದೆ. ಈಗ, ಕಿಂಗ್‌ಫಿಶರ್ ಏರ್‌ಲೈನ್ಸ್ ಅಸ್ತಿತ್ವದಲ್ಲಿಲ್ಲ ಮತ್ತು RCB ಯ ಏಕೈಕ ಮಾಲೀಕ ಯುನೈಟೆಡ್ ಸ್ಪಿರಿಟ್ಸ್ ಆಗಿದೆ. ಪ್ರಸ್ತುತ ಇದು ಯಾವುದೇ ವೈಯಕ್ತಿಕ ಮಾಲೀಕರನ್ನು ಹೊಂದಿಲ್ಲ.
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಆರನೇ ಅತ್ಯಮೂಲ್ಯ ಫ್ರಾಂಚೈಸಿ ಮತ್ತು 1.25 ಮಿಲಿಯನ್ ಮೌಲ್ಯದ್ದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಸ್ತುತ ಮಾಲೀಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಮದ್ಯ ಕಂಪನಿಯಾಗಿದೆ. ಇದು ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯಗಳ ಕಂಪನಿಯಾಗಿದ್ದು, ಇದರ ಹಿಂದಿನ ಹೆಸರು ಯುನೈಟೆಡ್ ಬ್ರೂವರೀಸ್.