ನಟ ದರ್ಶನ್ ಸಹೋದರಿ ಇವರೇ ನೋಡಿ.. ಎಲ್ಲಿಯೂ ತಮ್ಮನ ಹೆಸರು ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ಇವರು ಎಲ್ಲಿರ್ತಾರೆ ಗೊತ್ತೇ !
ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಸದ್ಯ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿದ್ದಾರೆ.
ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಸಹ ಕನ್ನಡದ ಹೆಸರಾಂತ ನಟ. ಇವರಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ದಿವ್ಯಾ, ದಿನಕರ್ ಮತ್ತು ದರ್ಶನ್.
ದಿವ್ಯಾ ತೂಗುದೀಪ ಅವರು ನಟ ದರ್ಶನ್ ನಿಜವಾದ ಸಹೋದರಿ. ಆದರೆ ದರ್ಶನ್ ಅವರ ಮತ್ತೊಬ್ಬ ಸಹೋದರಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ವಂತ ತಮ್ಮ ಸ್ಟಾರ್ ಹೀರೋ ಆದರೂ, ಎಲ್ಲಿಯೂ ಆತನ ಹೆಸರು ಹೇಳದೆ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ.
ದರ್ಶನ್ ಅಕ್ಕನ ಹೆಸರು ಸರಳ. ಕಳೆದ ಏಳು ವರ್ಷದಿಂದ ಮನೆಯಲ್ಲೇ ಅಡುಗೆ ತಯಾರಿಸಿ ಕೊಡುತ್ತಾರೆ. ಮುಂಚಿತವಾಗಿ ಹೇಳಿದರೆ ಸಾಕು ರುಚಿ ರುಚಿಯಾದ ಅಡುಗೆ ಮಾಡಿ ಕೊಡುತ್ತಾರೆ.
ಸರಳ ಅವರು ದರ್ಶನ್ ದೊಡ್ಡಪ್ಪನ ಮಗಳು. ಸರಳ ಅವರು ಮೈಸೂರಿನ ಯಾದವಗಿರಿಯಲ್ಲಿ ವಾಸಿಸುತ್ತಾರೆ.
ನಮ್ಮ ವಂಶ ಸ್ವಾಭಿಮಾನವಾಗಿ ಬದುಕಬೇಕು ಎಂಬುದೇ ದರ್ಶನ್ ಆಸೆ ಎಂದು ಸರಳ ಹೇಳಿದ್ದಾರೆ.
ದೊಡ್ಡಪ್ಪನ ಮಕ್ಕಳು ಅಂತ ದರ್ಶನ್ ಎಂದಿಗೂ ಭೇದ-ಭಾವ ಮಾಡಿಲ್ಲ. ಸ್ವಂತ ಅಕ್ಕ-ತಂಗಿಯರ ರೀತಿ ನೋಡಿಕೊಳ್ಳುತ್ತಾನೆ ಎಂದಿದ್ದಾರೆ.