ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪತ್ನಿ ಯಾರು ಗೊತ್ತಾ? ಪತಿಯಂತೆ ಇವರು ಕೂಡ ಸಖತ್ ಫೇಮಸ್!
ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರನ್ನು ದೇಶದ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಸೇರಿಸಲಾಗಿದೆ. ದ್ರಾವಿಡ್ ರನ್ ಗಳಿಸುವುದಕ್ಕಿಂತ ಹೆಚ್ಚು ಕ್ರೀಸ್’ನಲ್ಲಿ ಉಳಿಯುತ್ತಾ ತಂಡಕ್ಕೆ ಆಸರೆಯಾಗುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ‘ದಿ ವಾಲ್’ ಎಂದು ಕರೆಯಲಾಗುತ್ತದೆ
ದ್ರಾವಿಡ್ ಅವರ ಈ ಯಶಸ್ವಿ ವೃತ್ತಿಜೀವನದ ಹಿಂದೆ, ಅವರ ಪತ್ನಿ ವಿಜೇತಾ ಅವರ ತ್ಯಾಗ ಮತ್ತು ಕೊಡುಗೆಯೂ ಇದೆ.
ರಾಹುಲ್ ದ್ರಾವಿಡ್ 1 ಜನವರಿ 1973 ರಂದು ಇಂದೋರ್’ನಲ್ಲಿ ಜನಿಸಿದರು. 1996 ರಲ್ಲಿ, ಲಾರ್ಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. 16 ವರ್ಷಗಳ ವೃತ್ತಿಜೀವನದಲ್ಲಿ ಅವರು 164 ಟೆಸ್ಟ್’ಗಳಲ್ಲಿ 13,288 ರನ್ ಮತ್ತು 344 ODIಗಳಲ್ಲಿ 10,889 ರನ್ ಗಳಿಸಿದ್ದಾರೆ.
ದ್ರಾವಿಡ್ ಭಾರತದ ಪರ ಏಕೈಕ ಟಿ20 ಪಂದ್ಯವನ್ನೂ ಆಡಿದ್ದು ಅದರಲ್ಲಿ 31 ರನ್ ಗಳಿಸಿದ್ದರು. ಇನ್ನು 2012 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಿದರು.
ರಾಹುಲ್ ದ್ರಾವಿಡ್ ಪತ್ನಿ ಹೆಸರು ವಿಜೇತಾ ಪೆಂಡಾರ್ಕರ್. ಮೇ 4, 2003 ರಂದು ಡಾ. ವಿಜೇತಾ ಪೆಂಡಾರ್ಕರ್ ಜೊತೆ ದ್ರಾವಿಡ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿಜೇತಾ ಅವರ ತಂದೆ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ ಬಳಿಕ ದ್ರಾವಿಡ್ ಕುಟುಂಬದ ನಡುವೆ ವಿಜೇತ ಆಪ್ತತೆ ಬೆಳೆದಿತ್ತು. ಅಂದಹಾಗೆ ವಿಜೇತ ವೃತ್ತಿಯಲ್ಲಿ ಖ್ಯಾತ ವೈದ್ಯೆ.