ಟೀಂ ಇಂಡಿಯಾದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ ಹೌದು!

Sun, 28 Apr 2024-5:13 pm,

ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ಬಹಳ ಇಂದಿನದಲ್ಲ. ಕ್ರಿಕೆಟಿಗರು ಮತ್ತು ನಟಿಯರ ನಡುವೆ ಉತ್ತಮ ಬಾಂಧವ್ಯವಿದೆ. ಕೆಲ ಬಾಲಿವುಡ್ ನಟಿಯರನ್ನು ಮದುವೆಯಾದ ಕ್ರಿಕೆಟಿಗರೂ ಇದ್ದಾರೆ. ಮೊಹಮ್ಮದ್ ಅಜರುದ್ದೀನ್‌’ನಿಂದ ವಿರಾಟ್ ಕೊಹ್ಲಿವರೆಗಿನ ಹಲವು ಕ್ರಿಕೆಟಿಗರ ಹೆಸರು ಈ ಪಟ್ಟಿಯಲ್ಲಿ ಸೇರಿವೆ.

ಜಹೀರ್ ವೃತ್ತಿಜೀವನವು 2000 ರಲ್ಲಿ ಪ್ರಾರಂಭವಾಯಿತು. ಇನ್ನೊಂದೆಡೆ ಸಾಗರಿಕಾ ಘಾಟ್ಕೆ ಅವರು ಸೂಪರ್-ಡ್ಯೂಪರ್ ಹಿಟ್ ಚಲನಚಿತ್ರ ಚಕ್ ದೇ ಇಂಡಿಯಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಸಾಗರಿಕಾ ಘಾಟ್ಗೆ ನಟಿ ಮತ್ತು ರೂಪದರ್ಶಿ. ಜೊತೆಗೆ ರಾಷ್ಟ್ರೀಯ ಮಟ್ಟದ ಫೀಲ್ಡ್ ಹಾಕಿ ಆಟಗಾರ್ತಿ. ಚಕ್ ದೇ ಸಿನಿಮಾದಲ್ಲಿ ಪ್ರೀತಿ ಸಬರ್ವಾಲ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

2015 ರಲ್ಲಿ, ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 6 ನಲ್ಲಿ ಭಾಗವಹಿಸಿದ್ದು, ಫೈನಲಿಸ್ಟ್ ಆಗಿ ಹೊರಹೊಮ್ಮಿದರು.

ಮಹಾರಾಷ್ಟ್ರದ ಕೊಲ್ಲಾಪುರದ ಮಹಾರಾಷ್ಟ್ರದ ಕುಟುಂಬದಲ್ಲಿ ಜನಿಸಿದ ಸಾಗರಿಕಾ, ನಂತರ ಮೇಯೊ ಕಾಲೇಜ್ ಗರ್ಲ್ಸ್ ಸ್ಕೂಲ್‌’ಗೆ ಸೇರಲು ರಾಜಸ್ಥಾನದ ಅಜ್ಮೀರ್‌ಗೆ ಸ್ಥಳಾಂತರಗೊಂಡರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link