ಟೀಂ ಇಂಡಿಯಾ ಸ್ಟಾರ್ ಯುವರಾಜ್ ಸಿಂಗ್ ಪತ್ನಿ ಯಾರೆಂದು ಗೊತ್ತೇ? ಈಕೆ ಬಾಲಿವುಡ್’ನ ಖ್ಯಾತ ನಟಿ.. ಸಲ್ಮಾನ್ ಖಾನ್ ಜೊತೆಯೂ ನಟಿಸಿದ್ರು ಈ ಬ್ಯೂಟಿ
ಟೀಂ ಇಂಡಿಯಾದ ದಿಗ್ಗಜ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಟಿ20 ವಿಶ್ವಕಪ್ ಬ್ರಾಂಡ್ ಅಂಬಾಸಿಡರ್ ಆಗಿ ಯುವಿ ಇತ್ತೀಚೆಗೆ ನೇಮಕಗೊಂಡಿದ್ದಾರೆ
ನಾವಿಂದು ಈ ವರದಿಯಲ್ಲಿ ಯುವರಾಜ್ ಸಿಂಗ್ ಅವರ ಪತ್ನಿಯ ಬಗ್ಗೆ ಕೊಂಚ ಮಾಹಿತಿ ನೀಡಲಿದ್ದೇವೆ.
ಟೀಂ ಇಂಡಿಯಾದ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಪತ್ನಿ ಹೆಸರು ಹೇಜೆಲ್ ಕೀಚ್. ಬ್ರಿಟಿಷ್ ಮೂಲದವರಾದರೂ ಈಕೆ ಬಾಲಿವುಡ್’ನಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ.
ಟೀಂ ಇಂಡಿಯಾದ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಪತ್ನಿ ಹೆಸರು ಹೇಜೆಲ್ ಕೀಚ್. ಬ್ರಿಟಿಷ್ ಮೂಲದವರಾದರೂ ಈಕೆ ಬಾಲಿವುಡ್’ನಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ.
ಫೆಬ್ರವರಿ 28, 1987 ರಂದು ಇಂಗ್ಲೆಂಡಿನ ಎಸೆಕ್ಸ್ನಲ್ಲಿ ಜನಿಸಿದ ಹೇಜಲ್ ಕೀಚ್ ಅವರ ತಂದೆ ಬ್ರಿಟಿಷ್ ಮೂಲದವರಾಗಿದ್ದರೆ, ತಾಯಿ ಭಾರತೀಯ ಮೂಲದವರು.
ಇನ್ನು ಹೇಜಲ್ ಕೀಚ್ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ. ಗ್ರೇಟರ್ ಲಂಡನ್‌ನ ರೆಡ್‌ಬ್ರಿಡ್ಜ್’ನಲ್ಲಿರುವ ಬೀಲ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ ಅವರು, ಭಾರತೀಯ ಶಾಸ್ತ್ರೀಯ, ಪಾಶ್ಚಿಮಾತ್ಯ ಮತ್ತು ಬ್ರಿಟಿಷ್ ಸಮಕಾಲೀನ ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ.
2007 ರಲ್ಲಿ ತಮಿಳು ಚಿತ್ರ 'ಬಿಲ್ಲಾ' ಮೂಲಕ ಹೇಝಲ್ ಕೀಚ್ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 2013 ರಲ್ಲಿ, ಬಿಗ್ ಬಾಸ್ 7ರಲ್ಲೂ ಕಾಣಿಸಿಕೊಂಡರು. ಅದಾದ ನಂತರ 2011 ರಲ್ಲಿ, ಬಾಲಿವುಡ್ ಸಿನಿಮಾ 'ಬಾಡಿಗಾರ್ಡ್' ಮೂಲಕ ಹಿಂದಿ ಸಿನಿರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮತ್ತು ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು.
30 ನವೆಂಬರ್ 2016 ರಂದು ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹೇಝಲ್ ವಿವಾಹವಾದರು. ಇವರಿಬ್ಬರ ಪ್ರೇಮಕಥೆ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.