ಮದ್ಯದ ದೊರೆ ವಿಜಯ್ ಮಲ್ಯ ಮಗಳು ಯಾರು ಗೊತ್ತಾ! ಅಂದದಲ್ಲಿ ಬಾಲಿವುಡ್ ನಟಿಯರಿಗೆ ಸೆಡ್ಡು ಹೊಡೆಯೋವಷ್ಟು ಬ್ಯೂಟಿ ಈಕೆ
PNBಯಿಂದ ಸಾವಿರಾರು ಕೋಟಿ ಸಾಲ ಪಡೆದು ಲಂಡನ್’ಗೆ ಪಲಾಯನ ಮಾಡಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಒಡೆಯ ಮದ್ಯದ ದೊರೆ ವಿಜಯ್ ಮಲ್ಯ ನಿಮಗೆ ತಿಳಿದಿರಲೇಬೇಕು. ಅಂತಹ ಕುಖ್ಯಾತಿ ಪಡೆದ ಈ ಉದ್ಯಮಿಗೆ ಮಗಳಿದ್ದು, ಆಕೆ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾಳೆ.
ವಿಜಯ್ ಮಲ್ಯ ಅವರ ದತ್ತು ಪುತ್ರಿ ಲೈಲಾ ಮಲ್ಯ ಬಗ್ಗೆ ಈ ವರದಿಯಲ್ಲಿ ಮಾತನಾಡುತ್ತಿದ್ದೇವೆ. ಅಂದಹಾಗೆ ವಿಜಯ್ ಮಲ್ಯಗೆ ಲಿಯಾನಾ, ತಾನ್ಯಾ ಮತ್ತು ಲೈಲಾ ಎಂಬ ಮೂವರು ಪುತ್ರಿಯರಿದ್ದಾರೆ. ಇವರಲ್ಲಿ ಲೈಲಾ ಮಲ ಮಗಳು. ವಿಜಯ್ ಮಲ್ಯ ತನ್ನ ಮೊದಲ ಪತ್ನಿ ಸಮೀರಾಗೆ ವಿಚ್ಛೇದನ ನೀಡಿ, ರೇಖಾ ಎಂಬಾಕೆಯನ್ನು ವಿವಾಹವಾದರು. ರೇಖಾ ಪತಿ ಶಾಹಿದ್ ಮೆಹಮೂದ್. ಈ ಜೋಡಿಗೆ ಲೈಲಾ ಮತ್ತು ಕಬೀರ್ ಮೆಹಮೂದ್ ಎಂಬ ಇಬ್ಬರು ಮಕ್ಕಳಿದ್ದರು. ಹೀಗಾಗಿ ವಿಜಯ್ ಮಲ್ಯ ಲೈಲಾಳನ್ನು ದತ್ತು ಪಡೆದರು.
ಲೈಲಾ ಅವರ ಪತಿ ಸಮೀರ್ ಸಿಂಗ್ Investment banker. ಬೆಂಗಳೂರಿನ ಅದಿತಿ ಇಂಟರ್‌ನ್ಯಾಶನಲ್ ಸ್ಕೂಲ್’ನಲ್ಲಿ ಓದಿದ ಲೈಲಾ ಫ್ಯಾಶನ್ ಕಲಿಯಲು ಅಮೆರಿಕಕ್ಕೆ ಹೋದರು. ಫ್ಯಾಶನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನ್ಯೂಯಾರ್ಕ್ನಿಂದ ಅಧ್ಯಯನ ಪೂರ್ಣಗೊಳಿಸಿದರು. ಇದಕ್ಕೂ ಮುನ್ನ ಮ್ಯಾಸಚೂಸೆಟ್ಸ್’ನ ಬೆಂಟ್ಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ತನ್ನ ಅಧ್ಯಯನವನ್ನು ಮುಗಿಸಿದ ನಂತರ, ಲೈಲಾ ಭಾರತಕ್ಕೆ ಹಿಂತಿರುಗಿ ಇಲ್ಲಿಯೇ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಲೈಲಾ ವೋಗ್ ಬ್ರಾಂಡ್’ನೊಂದಿಗೆ ಆಭರಣ ವಿನ್ಯಾಸಕಿ ಮತ್ತು ಸ್ಟೈಲಿಸ್ಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮ್ಮದೇ ಆದ ಸೋಶಿಯಲ್ ಬಟರ್ಫ್ಲೈ ಬ್ರ್ಯಾಂಡ್ ಪ್ರಾರಂಭಿಸಿ, ಬೆಂಗಳೂರು ಮೂಲದ ಚಿಲ್ಲರೆ ವ್ಯಾಪಾರಿ ಕಹ್ವಾಗೆ ಕಾಂಟ್ರಾಕ್ಟ್ ನೀಡಿದರು. ಇದಲ್ಲದೆ, ಲೈಲಾ ಫ್ಯಾಷನ್ ಮತ್ತು ಸ್ಟೈಲ್’ನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದರಿಂದ ಅನೇಕ ಫ್ಯಾಶನ್ ವೀಕ್ ಶೋಗಳಲ್ಲಿ ಸಹ ಭಾಗವಹಿಸುತ್ತಾರೆ.
ಇನ್ನು ಐಪಿಎಲ್ ವಿವಾದಕ್ಕೂ ಲೈಲಾ ಹೆಸರು ತಳುಕು ಹಾಕಿಕೊಂಡಿತ್ತು. ಲೈಲಾ ಅವರು ಮಾಜಿ ಐಪಿಎಲ್ ಕಮಿಷನರ್ ಲಲಿತ್ ಮೋದಿ ಜೊತೆ ಕೆಲಸ ಮಾಡುತ್ತಿದ್ದರು. ಆದರೆ ಇವರಿಬ್ಬರ ನಡುವೆ ಸಂಬಂಧವಿದೆ ಎಂಬ ಊಹಾಪೋಹ ಹಬ್ಬಲು ಪ್ರಾರಂಭಿಸಿತು. ಅದಾದ ಬಳಿಕ ಕೆಲಸ ತ್ಯಜಿಸಿ, ಮತ್ತೆ ಫ್ಯಾಶನ್ ಲೋಕಕ್ಕೆ ತೆರಳಿದರು.