ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!
ಸುನಿಲ್ ಗವಾಸ್ಕರ್ ಅವರನ್ನು 'ಸನ್ನಿ' ಎಂದೇ ತಂಡದಲ್ಲಿದ್ದ ಅನೇಕರು ಕರೆಯುತ್ತಿದ್ದರು. ಭಾರತೀಯ ತಂಡದ ಅನೇಕ ಸಾಗರೋತ್ತರ ವಿಜಯಗಳಿಗೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಗೆಲುವಿಗೆ ಕಾರಣರಾದರು ಇವರೇ.
ನಾವಿಂದು ಈ ವರದಿಯಲ್ಲಿ ಸುನಿಲ್ ಗವಾಸ್ಕರ್ ಹೆಂಡತಿ ಮತ್ತು ಮಗ ಯಾರೆಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮುಂಬೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗವಾಸ್ಕರ್, ಸೇಂಟ್ ಕ್ಸೇವಿಯರ್ಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. 1966 ರಲ್ಲಿ ಭಾರತದ ಶಾಲಾ ವರ್ಷದ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟರು. 1966/67 ರಲ್ಲಿ ಡುಂಗರ್‌ಪುರ್ ವಿರುದ್ಧ ವಜೀರ್ ಸುಲ್ತಾನ್ ಕೋಲ್ಟ್ಸ್ XI ಪರ ಅವರ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವಾಗಿತ್ತು. ಅಂದಹಾಗೆ ಗವಾಸ್ಕರ್ ಬಾಂಬೆ ಪರ ರಣಜಿ ಆಡಿದ್ದರು.
ಟ್ರಿನಿಡಾಡ್’ನ ಪೋರ್ಟ್ ಆಫ್ ಸ್ಪೇನ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ಇನ್ನಿಂಗ್ಸ್ ಆಡಿದ ಗವಾಸ್ಕರ್ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಇದು ಮೊದಲ ಗೆಲುವಾಗಿದೆ.
ಸುನಿಲ್ ಅವರ ಪತ್ನಿ ಮಾರ್ಷ್ನಿಲ್ ಗವಾಸ್ಕರ್, ಉತ್ತರ ಪ್ರದೇಶದ ಕಾನ್ಪುರ ನಿವಾಸಿ. ಅವರು ಪ್ರಸ್ತುತ ಮಕ್ಕಳಿಗೆ ಕ್ರೀಡೆಯಲ್ಲಿ ತರಬೇತಿ ನೀಡುವ ಮೂಲಕ ಕ್ರಿಕೆಟ್’ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಇವರಿಗೆ ರೋಹನ್ ಗವಾಸ್ಕರ್ ಎಂಬ ಮಗನಿದ್ದಾನೆ. ಇವರು ಸಹ ತಂದೆಯಂತೆ ಕ್ರಿಕೆಟ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.