KGF ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಸಹೋದರಿ ಯಾರು ಗೊತ್ತೇ? ಅವರು ಬೇರಾರೂ ಅಲ್ಲ ಕನ್ನಡದ ಸ್ಟಾರ್‌ ನಟನ ಪತ್ನಿ!

Thu, 24 Oct 2024-11:46 am,

ನಿರ್ದೇಶಕ ಪ್ರಶಾಂತ್ ನೀಲ್.. ಜಗತ್ತಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಚಿತ್ರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿದೆ.   

ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನೀಲ್, ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರಗಳ ಮೂಲಕ ದೇಶದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದರು. ಕೆಜಿಎಫ್ ಚಿತ್ರದ ನಂತರ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಮತ್ತೊಮ್ಮೆ ಭರ್ಜರಿ ಹಿಟ್ ಆಗಿತ್ತು. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಡೈರೆಕ್ಟರ್ ಆದರು.   

ಪ್ರಶಾಂತ್ ನೀಲ್ ಅವರ ಸಿನಿಮಾಗಳಿಗಾಗಿ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅವರು ಸಲಾರ್ 2 ಪ್ರಾಜೆಕ್ಟ್‌ನ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಸದ್ಯದಲ್ಲೇ ಕೆಜಿಎಫ್ 3 ಸಿನಿಮಾ ಜೊತೆಗೆ ಯಂಗ್ ಟೈಗರ್ ಎನ್ ಟಿಆರ್ ಜೊತೆ ಸಿನಿಮಾ ಶುರು ಮಾಡಲಿದ್ದಾರೆ ಅನ್ನೋದು ಗೊತ್ತೇ ಇದೆ.   

ಆದರೆ ನಿರ್ದೇಶಕರಾಗಿ ಒಳ್ಳೆಯ ಹೆಸರು ಮಾಡಿರುವ ಪ್ರಶಾಂತ್ ನೀಲ್ ಕುಟುಂಬದಲ್ಲಿಯೇ ಒಬ್ಬ ಸ್ಟಾರ್ ಹೀರೋ ಇದ್ದಾರೆ. ಹೌದು.. ಪ್ರಶಾಂತ್ ನೀಲ್ ಬಾವ ಕನ್ನಡದಲ್ಲಿ ಸ್ಟಾರ್ ಹೀರೋ..ಈಗ ತೆಲುಗಿಗೆ ಎಂಟ್ರಿ ಕೊಡಲಿದ್ದಾರಂತೆ.  

ಕನ್ನಡದಲ್ಲಿ ಶ್ರೀಮುರಳಿ ಅವರು ತಮ್ಮ ಮೊದಲ ಚಿತ್ರ ಚಂದ್ರ ಚಕೋರಿಯ ಮೂಲಕ ದೊಡ್ಡ ಹಿಟ್ ಪಡೆದರು. ಅದರ ನಂತರ, ಅವರು ಸತತ ಹಿಟ್‌ ಸಿನಿಮಾ ಮಾಡುವ ಮೂಲಕ ರೋರಿಂಗ್ ಸ್ಟಾರ್ ಟ್ಯಾಗ್ ಪಡೆದರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಫಾಲೋಯಿಂಗ್ ಇದೆ. 2008 ರಲ್ಲಿ ಶ್ರೀ ಮುರಳಿ ಪ್ರಶಾಂತ್ ನೀಲ್ ಅವರ ಅಕ್ಕ ವಿದ್ಯಾ ಅವರನ್ನು ವಿವಾಹವಾದರು. ಪ್ರಶಾಂತ್ ನೀಲ್ ಅವರಿಗೆ ಮೊದಲ ಅವಕಾಶ ಕೊಟ್ಟವರು ಶ್ರೀ ಮುರಳಿ.  

ಪ್ರಶಾಂತ್ ನೀಲ್ ಅವರ ಮೊದಲ ಚಿತ್ರ ಉಗ್ರಂ ಚಿತ್ರದಲ್ಲಿ ಶ್ರೀಮುರಳಿ ನಾಯಕ. ಸದ್ಯ ಬಗೀರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ. ಇದರೊಂದಿಗೆ ಶ್ರೀ ಮುರಳಿ ಈಗ ತೆಲುಗಿನಲ್ಲೂ ಪ್ರಮೋಷನ್ ಮಾಡುತ್ತಿದ್ದಾರೆ. ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31 ರಂದು ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ನೀಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link