ಕನ್ನಡ ಇಂಡಸ್ಟ್ರೀ ಟಾಪ್ ನಟನಾಗಿದ್ದರೂ ʼಈʼ ಕಾರಣಕ್ಕೆ ವಿಷ್ಣುವರ್ಧನ್ ಜೊತೆ ನಟಿಸಲಿಲ್ಲವಂತೆ ಮಾಲಾಶ್ರೀ! ಅಷ್ಟಕ್ಕೂ ಏನದು?
ಕನ್ನಡ ಸಿನಿಮಾರಂಗದ ಹಿರಿಯ ನಟಿ ಮಾಲಾಶ್ರೀ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ... ತಮ್ಮ ಅದ್ಭುತ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಈ ಚೆಲುವೆ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಕನ್ನಡಿಗರ ನೆಚ್ಚಿನ ನಟಿ ಮಾಲಾಶ್ರೀ ಸಾಕಷ್ಟು ಕನ್ನಡದ ನಟರೊಂದಿಗೆ ನಟಿಸಿದ್ದಾರೆ.. ಆದರೆ ಇವರು ನಟ ವಿಷ್ಣುವರ್ಧನ್ (Vishnuvardhan) ಅವರೊಂದಿಗೆ ಮಾತ್ರ ಒಂದೇ ಒಂದು ಸಿನಿಮಾದಲ್ಲಿಯೂ ನಟಿಸಲಿಲ್ಲ..
ಕನ್ನಡ ಚಿತ್ರರಂಗದ ಹೆಸರಾಂತ ನಟ ಡಾ. ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲವಾದರೂ ಅವರ ನೆನಪು ಮಾತ್ರ ಅಜರಾಮರ.. ನಟ ವಿಷ್ಣುವರ್ಧನ್ ನಟಿಸಿರುಬ ಬಹುತೇಕ ಸಿನಿಮಾಗಳು ಭರ್ಜರಿ ಹಿಟ್ ಆಗಿವೆ.. ಆದರೆ ಈ ನಟ ಮಾಲಾಶ್ರೀಯವರೊಂದಿಗೆ ನಟಿಸಲಿಲ್ಲ..
ಮಾಲಾಶ್ರೀ ಸಂದರ್ಶನವೊಂದರಲ್ಲಿ ಮಾತನಾಡುವ ನನ್ನ ಜೊತೆ ಮೃಗ ನಟಿಸಿದರು ಸಹ ತುಂಬಾನೇ ಫೇಮಸ್ ಆಗುತ್ತದೆ ಎಂದಿದ್ದರಂತೆ.. ಈ ಮಾತು ವಿಷ್ಣುವರ್ಧನ್ ಅವರಿಗೆ ಗೊತ್ತಾಗಿ ಅವರು ನಟಿ ಮಾಲಾಶ್ರೀ ಜೊತೆ ನಟಿಸುವುದಿಲ್ಲವೆಂದು ಹಿಂದೆ ಸರಿದಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ.
ಅಲ್ಲದೇ ನಟ ವಿಷ್ಣುವರ್ಧನ್ ಅವರೊಂದಿಗೆ ನಟಿಸಲು ನಟಿ ಮಾಲಾಶ್ರೀ ಅವರಿಗೆ ಅವಕಾಶ ಸಿಕ್ಕಿಲ್ಲವಾದ್ದರಿಂದ ಅವರಿಬ್ಬರೂ ಒಟ್ಟಿಗೆ ನಟಿಸಲಿಲ್ಲ ಎಂದೂ ಸಹ ಹೇಳಲಾಗುತ್ತದೆ..
ಇನ್ನು ನಟಿ ಮಾಲಾಶ್ರೀ ಪುತ್ರಿ ಆರಾಧನಾ ಸದ್ಯ ಸಿನಿರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾದಿಂದಲೇ ಭರ್ಜರಿ ಹೆಸರು ಮಾಡಿದ್ದಾರೆ.. ತಾಯಿಯಂತೆ ಮಗಳು ಕೂಡ ಲೇಡಿ ಸೂಪರ್‌ಸ್ಟಾರ್ ಆಗುತ್ತಾರೆ ಎನ್ನುವುದು ಕನ್ನಡ ಸಿನಿಪ್ರೇಮಿಗಳು ಅಭಿಪ್ರಾಯ..
ಅದರಂತೆ ಮಾಲಾಶ್ರೀ ಪುತ್ರನೂ ಸಹ ಯಾವ ಹಿರೋಗೂ ಕಡಿಮೆ ಇಲ್ಲ ಎಂಬಂತಿದ್ದಾರೆ.. ಅವರೂ ಕೂಡ ಸಿನಿರಂಗಕ್ಕೆ ಕಾಲಿಡಬಹುದು ಎನ್ನಲಾಗುತ್ತಿದೆ.. ಆದರೆ ಸತ್ಯ ಮುಂದಿನ ದಿನಗಳಲ್ಲಿ ತಿಳಿಯಲಿದೆ..