ರೈಲಿನ ಪ್ರತಿಯೊಂದು ಬೋಗಿಯ ಮೇಲೆ ಈ ರೀತಿಯ ವೃತ್ತಾಕಾರದ ಮುಚ್ಚಳಗಳು ಏಕೆ ಇರುತ್ತವೆ ಗೊತ್ತೆ..?

Sat, 02 Nov 2024-5:16 pm,

ರೈಲಿನ ಪ್ರತಿ ಕೋಚ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲೆ ಈ ಮುಚ್ಚಳಗಳನ್ನು ಅಳವಡಿಸಲಾಗಿರುತ್ತದೆ.   

ರೈಲು ಕೋಚ್‌ಗಳ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಈ ವೃತ್ತಾಕಾರದ ಹುಡ್‌ಗಳನ್ನು ಗಾಳಿಗಾಗಿ ಬಳಸಲಾಗುತ್ತದೆ. ಜನದಟ್ಟಣೆಯಿಂದಾಗಿ ಕೋಚ್‌ಗಳಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು, ಈ ಮುಚ್ಚಳಗಳನ್ನು ಬಳಸಲಾಗುತ್ತದೆ.    

ರೈಲಿನೊಳಗಿನ ಬರುವ ಬಿಸಿ ಗಾಳಿಯು ಈ ವೃತ್ತಾಕಾರದ ವುಡ್‌ಗಳ ಮೂಲಕ ಹೊರಹೋಗುತ್ತದೆ. ನೀವು ಕಿಟಕಿಗಳ ಮೂಲಕ ಗಾಳಿ ಹೊರ ಹೋಗಬಹುದಲ್ಲ..? ಅಂತ ನೀವು ಅಂದುಕೊಂಡರೆ ಅದು ತಪ್ಪು.. ಬೆಚ್ಚಗಿನ ಗಾಳಿಯು ಯಾವಾಗಲೂ ಮೇಲಕ್ಕೆ ಚಲಿಸುತ್ತದೆ.  

ಭಾರತೀಯ ರೈಲ್ವೇ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ರೈಲ್ವೆ. ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ ಹೆಸರು ಮಾಡಿದೆ. ಸುಮಾರು 8000 ರೈಲು ನಿಲ್ದಾಣಗಳೊಂದಿಗೆ, ಭಾರತೀಯ ರೈಲ್ವೇ ಜನರ ಅನುಕೂಲಕ್ಕೆ ಆದ್ಯತೆ ನೀಡುತ್ತದೆ.  

ಸಧ್ಯ ಈ ಮುಚ್ಚಳಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಗೊತ್ತೆ..?: ಕೋಚ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಬಿಸಿ ಗಾಳಿ ಪ್ರಮಾಣ ಹೆಚ್ಚಾಗುತ್ತದೆ.. ಇಂತಹ ಸಂದರ್ಭದಲ್ಲಿ ಈ ಸೀಲಿಂಗ್ ವೆಂಟಿಲೇಟರ್‌ಗಳ ಮೂಲಕ ಬಿಸಿ ಗಾಳಿ ಹೊರ ಹೋಗುತ್ತದೆ. ಇದರಿಂದಾಗಿ ರೈಲಿನ ತಾಪಮಾನ ನಿಯಂತ್ರಣದಲ್ಲಿರುತ್ತದೆ.  

ರೈಲಿನಲ್ಲಿರುವ ಎಸಿ ಕಂಪಾರ್ಟ್ಮೆಂಟ್ ಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿರುತ್ತದೆ.. ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಗಾಳಿಯೂ ಬರುವುದಿಲ್ಲ. ಬಿಸಿ ಗಾಳಿಗೂ ಬರಲು ಜಾಗವಿರಲ್ಲ.   

ಆದರೆ ಸಾಮಾನ್ಯ ಕೋಚ್‌ಗಳಲ್ಲಿ ಬಿಸಿ ಗಾಳಿ ಪ್ರವೇಶ ಮಾಡುತ್ತದೆ.. ಒಂದು ವೇಳೆ ಈ ವೆಂಟಿಲೇಟರ್‌ಗಳು ಇರಲಿಲ್ಲ ಅಂದ್ರೆ, ಬೆಂಕಿ ಅವಘಡಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಸಾಧನವು ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲೂ ಸೋರದಂತೆ ಈ ಹುಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link