ನಿಮ್ಮ ಕಿವಿ ಸ್ವಚ್ಛಗೊಳಿಸಲು ʼಇಯರ್ ಬಡ್ಸ್ʼ ಬಳಸುತ್ತೀರಾ?; ಹಾಗಾದ್ರೆ ತಪ್ಪದೇ ಈ ಸುದ್ದಿಯನ್ನು ಓದಿರಿ!
ಕಿವಿಯನ್ನು ಸ್ವಚ್ಛಗೊಳಿಸಲು ಇಯರ್ ಬಡ್ಸ್ ಅಥವಾ ಹತ್ತಿಯನ್ನು ಬಳಸಬಾರದು ಏಕೆಂದರೆ ಅದು ಕಿವಿ ಕಾಲುವೆಯನ್ನು ಹಾನಿಗೊಳಿಸಬಹುದು ಮತ್ತು ಕಿರಿಕಿರಿಗೊಳಿಸಬಹುದು.
ಹೆಲ್ತ್ ಲೈನ್ ಪ್ರಕಾರ, ನೀವು ಇಯರ್ವ್ಯಾಕ್ಸ್ ಅನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು, ಅದಕ್ಕಾಗಿ ಅರ್ಧ ಕಪ್ ಉಗುರುಬೆಚ್ಚಗಿನ ನೀರಿನಲ್ಲಿ ಅರ್ಧ ಟೀಸ್ಪೂನ್ ಅಡುಗೆ ಸೋಡಾವನ್ನು ಬೆರೆಸಿ ಮತ್ತು ಅದನ್ನು ಡ್ರಾಪರ್ ಬಾಟಲಿಯಲ್ಲಿ ಇರಿಸಿ. ನೀವು ಒಮ್ಮೆಗೆ ಕಿವಿಯಲ್ಲಿ 5 ರಿಂದ 10 ಹನಿಗಳನ್ನು ಹಾಕಬಹುದು ಮತ್ತು ಒಂದು ಗಂಟೆಯ ನಂತರ ಕಿವಿಯನ್ನು ಶುದ್ಧ ನೀರಿನಿಂದ ತೊಳೆಯಿರಿ.
ಇಯರ್ ವ್ಯಾಕ್ಸ್ ಅನ್ನು ತೆಗೆದುಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಕಿವಿಯಲ್ಲಿ 5 ರಿಂದ 10 ಹನಿಗಳನ್ನು ಹಾಕಿ ಮತ್ತು 5 ನಿಮಿಷಗಳ ಕಾಲ ಕುತ್ತಿಗೆಯನ್ನು ಪಕ್ಕಕ್ಕೆ ಬಾಗಿಸಿ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ವಾರಕ್ಕೊಮ್ಮೆ ಬಳಸಬಹುದು.
ಆಯಿಲ್ ಬಳಸಿ ಇಯರ್ ವ್ಯಾಕ್ಸ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೇಣವನ್ನು ಮೃದುಗೊಳಿಸಲು ತೈಲವು ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಬೇಬಿ ಆಯಿಲ್, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು.
ಯಾವುದೇ ಎಣ್ಣೆ ತೆಗೆದುಕೊಂಡು, ಅದನ್ನು ಸ್ವಲ್ಪ ಬಿಸಿ ಮಾಡಿ ಡ್ರಾಪರ್ ಬಾಟಲಿಯಲ್ಲಿ ತುಂಬಿಸಿ. ಅದನ್ನು ಕಿವಿಯಲ್ಲಿ ಹಾಕಿ 5 ನಿಮಿಷಗಳ ಕಾಲ ಓರೆಯಾಗಿಡಬೇಕು. ಆದರೆ ಯಾವುದೇ ಕಾರಣಕ್ಕೂ ಎಣ್ಣೆಯು ತುಂಬಾ ಬಿಸಿಯಾಗಿರಬಾರದು. ನೀವು ಇದನ್ನು ಪ್ರತಿದಿನವೂ ಮಾಡಬಹುದು.