Whatsapp ಬದಲು Signal ಬಳಸುತ್ತೀರಾ? ಇಲ್ಲಿದೆ features ಬಗೆಗಿನ ಸಂಪೂರ್ಣಮಾಹಿತಿ
WhatsAppನಂತೆಯೇ Signal ಕೂಡಾ End-to-end encryption ಸೌಲಭ್ಯವನ್ನು ನೀಡುತ್ತದೆ. ಅಂದರೆ, ಸಂದೇಶ ಕಳುಹಿಸುವವರು ಮತ್ತು ಅದನ್ನು ಸ್ವೀಕರಿಸುವವರನ್ನು ಹೊರತುಪಡಿಸಿ ಬೇರೆ ಯಾರೂ ಆ ಸಂದೇಶವನ್ನು ಓದಲು ಸಾಧ್ಯವಾಗುವುದಿಲ್ಲ.
WhatsAppನಂತೆಯೇ Signal ಅಪ್ಲಿಕೇಶನ್‌ನಲ್ಲಿ ಸಹ ಗ್ರೂಪ್ ಮಾಡಬಹುದು. ಎಲ್ಲಾ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ, ಇಲ್ಲಿಯೂ ಅನೇಕ ಜನರನ್ನು ಗ್ರೂಪಿನ admin ಮಾಡಬಹುದು. ಇದಲ್ಲದೆ, ಗ್ರೂಪಿನ ಮಾಹಿತಿಯನ್ನು ಬದಲಾಯಿಸಬಹುದು.
Signal Appನಲ್ಲಿಯೂ ಫೋಟೋ ಮತ್ತು ವೀಡಿಯೊ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳಬಹುದು. ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳಂತೆ, ಸಿಗ್ನಲ್ ಆ್ಯಪ್ ನಲ್ಲಿ ಕೂಡಾ ಯಾವ ಫಾರ್ಮಾಟ್ ನಲ್ಲಿ ಬೇಕಾದರೂ ಫೈಲ್ ಗಳನ್ನು ಕಳುಹಿಸಬಹುದು.
ಮೊಬೈಲ್ ಮಾತ್ರವಲ್ಲದೆ ಲ್ಯಾಪ್ ಟಾಪ್,ಡೆಸ್ಕ್ ಟಾಪ್ ಗಳಲ್ಲಿಯೂ Signal App ಬಳಸಬಹುದು.
ಮೆಸೆಂಜ್ ಟೈಪ್ ಮಾಡುವ ಬದಲು ಆಡಿಯೋ ಮೆಸೇಜ್ ಕೂಡಾ ಕಳುಹಿಸಬಹುದು.
WhatsAppನಂತೆಯೇ ಆಡಿಯೋ ವಿಡಿಯೋ ಕರೆಗಳನ್ನು ಮಾಡಬಹುದು.