Actress Sudharani: ಮೊದಲ ಪತಿಯಿಂದ ನರಕ ಅನುಭವಿಸಿದ್ದ ಸುಧಾರಾಣಿ ಬಾಳನ್ನು ಬದಲಿಸಿದ ಎರಡನೇ ಪತಿ ಇವರೇ!!
ನಟಿ ಸುಧಾರಾಣಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾವಾರು ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಕಿರುತೆರೆಯಲ್ಲೂ ಪ್ರೇಕ್ಷಕರಿಗೆ ಮನರಂಜಿಸುತ್ತಿರುವ ನಟಿ ಸುಧಾರಾಣಿ ವೈಯಕ್ತಿಕ ಜೀವನದಲ್ಲಿ ದೊಡ್ಡ ದೊಡ್ಡ ನೋವುಗಳನ್ನೇ ಅನುಭವಿಸಿದ್ದಾರೆ..
ಖ್ಯಾತ ನಟ ಶಿವರಾಜ್ ಕುಮಾರ್ ಅವರ ಆನಂದ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಧಾರಾಣಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
ಹೀಗೆ ವೃತ್ತಿಯಲ್ಲಿ ಸಾಕಷ್ಟು ದೊಡ್ಡ ಯಶಸ್ಸನ್ನು ಕಂಡ ಈ ಚೆಲುವೆ ವೈಯಕ್ತಿಕ ಬದುಕಿನಲ್ಲಿನ ಒಂದು ನಿರ್ಧಾರದಿಂದ ನೋವಿನ ಸರಮಾಲೆಗೆ ಸಿಲುಕಿಕೊಂಡಿದ್ದರು..
ಬಾಳ ಸಂಗಾತಿ ಆಯ್ಕೆಯಲ್ಲಿ ಎಡವಿದ ನಟಿ ಸುಧಾರಾಣಿ ಮೊದಲ ಪತಿಯಿಂದ ನರಕಯಾತನೇ ಅನುಭವಿಸಿದ್ದರು.. ಪ್ರತಿನಿತ್ಯ ಕುಡಿದು ಹಿಂಸೆ ನೀಡುತ್ತಿದ್ದ ಆತನಿಂದ ನಟಿ ಬದುಕಿ ಬಂದದ್ದೇ ಪವಾಡ ಎಂದು ಹೇಳಬಹುದು..
ನಂತರ ಭಾರತಕ್ಕೆ ಮರಳಿ ಬಂದ ನಟಿ ಸುಧಾರಾಣಿ ಅವರ ಬಾಳಲ್ಲಿ ಬೆಳಕಾಗಿ ಬಂದದ್ದು ಅವರ ಎರಡನೇ ಪತಿ ಗೋವರ್ಧನ್.. ಸದ್ಯ ಈ ದಂಪತಿಗಳಿಗೆ ಹೆಣ್ಣು ಮಗಳಿದ್ದಾಳೆ..